ಫೆ. 16 ರಂದು ಕಾಯಕ ದಾಸೋಹ ಪ್ರತಿಷ್ಠಾನದ 15ನೇ ವಾರ್ಷಿಕೋತ್ಸವ

15th Anniversary of Kayaka Dasoha Foundation on Feb. 16th

ವಿಜಯಪುರ 13: ದೇವರ ಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಫೆಬ್ರವರಿ 16ರಂದು ನಡೆಯುವ ಕಾಯಕ ದಾಸೋಹ ಪ್ರತಿಷ್ಠಾನದ 15ನೇ ವಾರ್ಷಿಕೋತ್ಸವ, ವಿದ್ಯಾರ್ಥಿ ರತ್ನ ಪ್ರಶಸ್ತಿ ಪ್ರದಾನ ಹಾಗೂ ಕಾಯಕ ಧರ್ಮ ಸಾಕ್ಷ್ಯ ಚಿತ್ರ ಪ್ರದರ್ಶನ ಕಾರ್ಯಕ್ರಮದ ಪೂರ್ವಭಾವಿ ಸಭೆ ನಗರದ ಅಷ್ಟಫೈಲ್ ಬಂಗ್ಲೆ ಹತ್ತಿರ ನಡೆದ ಜರುಗಿತು. ಇದೇ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.  

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಕಾಯಕ ದಾಸೋಹ ಪ್ರತಿಷ್ಠಾನದ ಅಧ್ಯಕ್ಷ ಎನ್ ಬಿ ರೋಡಗಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷ ಕೂಡಾ ಕಾರ್ಯಕ್ರಮವನ್ನು ದೇವರಹಿಪ್ಪರಗಿಯ ಕಂಬಿ ಮಲ್ಲಯ್ಯ ದೇವಸ್ಥಾನದ ಆವರಣ ಮುಳಸಾವಳಗಿಯಲ್ಲಿ ಫೆ. 16 ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹೇಳಿದರು.  

ಮುಳಸಾವಳಗಿ ಗ್ರಾಮದ ನಾಟಿ ವೈದ್ಯರಾಗಿದ್ದ ಅಡಿವೆಪ್ಪ ಸಮಗಾರ ಅವರ ನೆನಪಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾರ್ಯಕ್ರಮದ ವೇದಿಕೆಗೆ ಆಧುನಿಕ ವಚನಕಾರ ಕುಮಾರ ಕಕ್ಕಯ್ಯ ಪೋಳ ಹೆಸರು ಇಡಲಾಗಿದೆ . ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಸಬಿನಾಳ ವಿರಕ್ತ ಮಠದ ಮ ನಿ ಪ್ರ ಸಿದ್ದರಾಮ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಉದ್ಘಾಟನೆಯನ್ನು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ (ಕುದರಿ ಸಲವಾಡಗಿ )ಅವರು ನೆರವೇರಿಸಲಿದ್ದಾರೆ. ಜನಪದ ಕ್ರೀಡೆ ಮಲ್ಲ ಕಂಬದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ನೆರವೇರಿಸಲಿದ್ದಾರೆ. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ರಾಮಪ್ಪ ಎಲ್‌. ಕೋರವಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ , ಖ್ಯಾತ ನೇತ್ರ ತಜ್ಞರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಬಿ. ಲಿಂಗದಳ್ಳಿ ಕಾಯಕ ಧರ್ಮ ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಮಕ್ಕಳ ಕಲ್ಯಾಣ ಸಮಿತಿ ನಿಕಟಪೂರ್ವ ಸದ್ಯಸ್ಯ ಹಾಗೂ ನ್ಯಾಯವಾದಿ ದಾನೇಶ ಅವಟಿ, ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶರಣಗೌಡ ಬಿರಾದಾರ, ದೇವರ ಹಿಪ್ಪರಗಿ ಉಪಾಧ್ಯಕ್ಷರಾದ ರಮೇಶ ಮಸಬಿನಾಳ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಆರ್‌.ಆರ್‌. ಮೂಲಿಮನಿ, ಶ್ರೀಮತಿ ಸನಂದಾ ಅ. ಸೊನ್ನಳ್ಳಿ, ಜೆಡಿಎಸ್ ಮುಖಂಡ ರವಿ ನಾಗಾವಿ, ಪತ್ರಕರ್ತ ಹಾಗೂ ಸಾಹಿತಿ ಕಲ್ಲಪ್ಪ ಶಿವಶರಣ, ವಿರೇಶ ಕುದರಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಜಯಪುರದ ಚಾಣಕ್ಯ ಕರಿಯರ ಅಕಾಡೆಮಿಯ ಸಂಸ್ಥಾಪಕರಾದ ಎನ್‌.ಎಂ.ಬಿರಾದಾರ ಅವರು ಸ್ಪರ್ಧಾತ್ಮಕತೆ ಮತ್ತು ವ್ಯಕ್ತಿತ್ವ ವಿಕಸನ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಧ ಎಮ್‌.ಬಿ. ಯಡ್ರಾಮಿ ಅವರು ವಿದ್ಯಾರ್ಥಿ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಳಸಾವಳಗಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಮಲಕಪ್ಪ ಎಸ್‌. ಸುರಗಿಹಳ್ಳಿ ಅವರಿಗೆ ದಾಸೋಹ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಗತಿಪರ ರೈತರಾದ ಸಿದರಾಮ ಎಲ್‌. ಹಡಪದ ಅವರಿಗೆ ದಾಸೋಹ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಎಸ್‌.ಡಿ.ಎಂ.ಸಿ. ಕೆಬಿಎಸ್ ಮುಳಸಾವಳಗಿಯ ಹಣಮಂತ್ರಾಯ ಈ ಹಿರೂರ ಅವರು ನಾಟಿ ವೈದ್ಯ ಅಡಿವೆಪ್ಪ ಸಮಗಾರ ಅವರ ಕುರಿತು ಮಾತನಾಡಲಿದ್ದಾರೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೈಚಬಾಳ ಗ್ರಾಮದ ಹಿರಿಯ ಸಾಧಕರ ಭಾವಚಿತ್ರ ವಿತರಿಸಲಿದ್ದಾರೆ ಎಂದು ಹೇಳಿದ ಅವರು ಮುಳಸಾವಳಗಿ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.  

ಈ ಸಂದರ್ಭದಲ್ಲಿ ಕಾಯಕ ದಾಸೋಹ ಪ್ರತಿಷ್ಠಾನದ ಉಪಾಧ್ಯಕ್ಷ ವಿಶ್ವನಾಥ ಸರಬಡಗಿ, ಸಾಹಿತಿ ಕಲ್ಲಪ್ಪ ಶಿವಶರಣ, ಸಂಶೋಧಕ ಲಾಯಪ್ಪ ಇಂಗಳೆ, ಮುಖಂಡರಾದ ಉಮೇಶ ರೋಡಗಿ, ಬಸವರಾಜ ಕುಬಕಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.