ಸತ್ಯಂ ಅಂತರಾಷ್ಟ್ರೀಯ ಶಾಲೆಯ 15ನೇ ವಾರ್ಷಿಕೋತ್ಸವ ಕಾರ್ಯಕ್ರಮ,
ಬಳ್ಳಾರಿ 12 : ನಗರದ ಸತ್ಯಂ ಅಂತರಾಷ್ಟ್ರೀಯ ಶಾಲೆಯಲ್ಲಿ ಶಾಲಾ ವಾರ್ಷಿಕ ದಿನ ’ಸತ್ಯಂ ಪರ್ವ-2025’ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಹಾಗೂ ಶಾಲೆಯ 1200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, 40ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳು ನೆರೆದಿದ್ದ ಸಭಿಕರಮನ ಸೆಳೆದವು.ವಿಶೇಷವಾಗಿ "ಅಗಜಾನ," "ಕಲಿಯುಗ ವೈಕುಂಠಪುರಿ," ಮತ್ತು "ಕಾಂತಾರ - ವರಾಹರೂಪಂ" ನೃತ್ಯಗಳು ನೆರೆದಿದ್ದ ಸಾವಿರಕ್ಕೂ ಹೆಚ್ಚು ಸಭಿಕರ ಮನಸ್ಸನ್ನು ಸೂರೆಗೊಂಡವು.ಕಾರ್ಯಕ್ರಮಕ್ಕೆ ಬೆಂಗಳೂರಿನ ಇಷ್ಕ್ ಇವೆಂಟ್ ಸಂಸ್ಥೆ ಸಹಯೋಗ ನೀಡಿತ್ತು.ತಮ್ಮ ಮಕ್ಕಳ ಪ್ರತಿಭೆಯನ್ನು ವೇದಿಕೆಯಲ್ಲಿ ಕಂಡು ಪೋಷಕರು ಪುಳಕಗೊಂಡರು.ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಏರಿ್ಡಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯ ಅತಿಥಿಗಳು ಬಹುಮಾನ ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು. ಸತ್ಯಂ ಶಾಲೆಯ15ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪೋಷಕರು ಹಾಗೂ ಶಾಲಾ ಸಿಬ್ಬಂದಿಯವರು ಇತರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಾಲಾಜಿ ವಿದ್ಯಾ ಅಕಾಡೆಮಿಯ ಅಧ್ಯಕ್ಷೆ ಆರ್. ಸುರೇಖಾ, ಕಾರ್ಯದರ್ಶಿ ಮತ್ತು ಕರೆಸ್ಪಾಂಡೆಂಟ್ ಆರ್. ಜಗದೀಶ್ ಕುಮಾರ್, ಬಾಲಾಜಿ ವಿದ್ಯಾ ಅಕಾಡೆಮಿಯ ಖಜಾಂಚಿ ನಿರ್ಮಲಾ ದೇವಿ, ಅಕಾಡೆಮಿಯ ಟ್ರಸ್ಟಿ ಪಾರ್ವತಮ್ಮ, ಸತ್ಯಂ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಭಾವನಾ, ಉಪ ಪ್ರಾಂಶುಪಾಲರಾದ ಶಂಭು, ಜನರಲ್ ಮ್ಯಾನೇಜರ್ ಟಿ. ಸುಂಕೇಶ್ವರ್ ರೆಡ್ಡಿ ಮತ್ತು ಸರ್ ಎಂವಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ನ ನಿರ್ದೇಶಕ ಪದ್ಮನಾಭ್ ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.