ಮುಧೋಳದಲ್ಲಿ 15 ಹೊಸ ಕೋವಿಡ್ ಪ್ರಕರಣಗಳು ದೃಢ: ಜಿಲ್ಲಾಧಿಕಾರಿ

ಬಾಗಲಕೋಟೆ,  ಮೇ 12, ಜಿಲ್ಲೆಯ ಮುಧೋಳದಲ್ಲಿ 15 ಹೊಸ ಕೋವಿಡ್ ಪ್ರಕರಣಗಳು  ದೃಡಪಟ್ಟಿದ್ದು, ಸೋಂಕಿತರ ಸಂಖ್ಯೆ 68 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ  ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ. ಮುಧೋಳದ 55  ವರ್ಷದ ಪಿ-865 ವ್ಯಕ್ತಿಗೆ ನೆಗಡಿ, ಕೆಮ್ಮು, ಜ್ವರ (ಐ.ಎಲ್.ಐ) ಹಿನ್ನಲೆಯಲ್ಲಿ ಸೋಂಕು  ದೃಡಪಟ್ಟರೆ, ಇನ್ನು 16 ವರ್ಷದ ಪಿ-870, 14 ವರ್ಷದ ಪಿ-871, 33 ವರ್ಷದ ಪಿ-872, 21  ವರ್ಷದ ಪಿ-873, 19 ವರ್ಷದ ಪಿ-874, ಪಿ-875, 34 ವರ್ಷದ ಪಿ-876, 30 ವರ್ಷದ ಪಿ-893,  17 ವರ್ಷದ ಪಿ-894, 32 ವರ್ಷದ ಪಿ-895, 20 ವರ್ಷದ ಪಿ-896, 18 ವರ್ಷದ ಪಿ-897, 29  ವರ್ಷದ ಪಿ-898, 80 ವರ್ಷದ ವೃದ್ದ ಪಿ-899 ಸೋಂಕು ದೃಡಪಟ್ಟಿದ್ದು, ಇವರಿಗೆ  ಅಹಮದಾಬಾದ್, ಗುಜರಾತ ಪ್ರಯಾಣದ ಹಿನ್ನಲೆಯಲ್ಲಿ ಸೋಂಕು ದೃಡಪಟ್ಟಿರುವುದಾಗಿ ವರದಿಯಾಗಿದೆ  ಎಂದು ತಿಳಿಸಿದ್ದಾರೆ.

ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 52  ಸ್ಯಾಂಪಲ್‍ಗಳ ಪೈಕಿ 15 ಪಾಜಿಟಿವ್ ಪ್ರಕರಣ, 36 ನೆಗಟಿವ್ ಪ್ರಕರಣಗಳು ವರದಿಯಾಗಿವೆ.  ಜಿಲ್ಲೆಯಿಂದ ಹೊಸದಾಗಿ ಮತ್ತೆ 65 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ರವಾನಿಸಿರುವುದಾಗಿ  ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನಲ್ಲಿ 938, ಇನ್ಟ್ಸಿಟ್ಯೂಶನ್  ಕ್ವಾರಂಟೈನ್‍ನಲ್ಲಿ ಒಟ್ಟು 409 ಜನ ಇದ್ದಾರೆ. ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು  ಸ್ಯಾಂಪಲ್ 4395. ಈ ಪೈಕಿ 4247 ನೆಗಟಿವ್ ಪ್ರಕರಣ, 68 ಪಾಜಿಟಿವ್ ಪ್ರಕರಣ, ಒಂದು ಮೃತ  ಪ್ರಕರಣ ವರದಿಯಾಗಿವೆ ಎಂದು ತಿಳಿಸಿದ್ದಾರೆ.ಜಿಲ್ಲೆಯಲ್ಲಿ  ಇಲ್ಲಿವರೆಗೆ ಬಾಗಲಕೋಟೆ ತಾಲೂಕಿನಲ್ಲಿ 15, ಮುಧೋಳದಲ್ಲಿ 24, ಜಮಖಂಡಿಯಲ್ಲಿ 10,  ಬಾದಾಮಿಯಲ್ಲಿ 18 ಹಾಗೂ ಬನಹಟ್ಟಿಯಲ್ಲಿ 1 ಕೋವಿಡ್ ಪ್ರಕರಣಗಳು ವರದಿಯಾಗಿವೆ.  ಇಲ್ಲಿವರೆಗೆ ಒಟ್ಟು ಕೋವಿಡ್‍ನಿಂದ 27 ಜನ ಗುಣಮುಖರಾಗಿದ್ದು, 40 ಜನ ಇನ್ನು ಚಿಕಿತ್ಸೆ  ಪಡೆಯುತ್ತಿದ್ದಾರೆ. 9 ಸ್ಯಾಂಪಲ್‍ಗಳು ರಿಜೆಕ್ಟ್ ಆಗಿದ್ದು, 14 ದಿನಗಳ  ಇನ್ಟ್ಸಿಟ್ಯೂಶನ್ ಕ್ವಾರಂಟೈನ್‍ನಿಂದ ಒಟ್ಟು 264 ಜನರನ್ನು ಬಿಡುಗಡೆ ಮಾಡಲಾಗಿದೆ.  ಜಿಲ್ಲೆಯಲ್ಲಿ 12 ಕಂಟೈನ್‍ಮೆಂಟ್ ಝೋನ್‍ಗಳು ಇರುವುದಾಗಿ ಜಿಲ್ಲಾಧಿಕಾರಿಗಳು  ತಿಳಿಸಿದ್ದಾರೆ.