ರಾಜ್ಯದ ಲಿಂಗನಮಕ್ಕಿಯಲ್ಲಿ 15 ಸೆ.ಮೀ ಮಳೆಯಾಗಿದೆ

ಬೆಂಗಳೂರು, ಆಗಸ್ಟ್ 3  ರಾಜ್ಯದ ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಸಕ್ರಿಯವಾಗಿದ್ದು, 

 ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ

ಲಿಂಗನಮಕ್ಕಿ 15, ಕೊಲ್ಲೂರು, ಕಮ್ಮರಡಿ, ಅಗುಂಬೆ  ತಲಾ 7. ಬೀದರ್, ಭಾಲ್ಕಿ, ಹುಮ್ನಾಬಾದ್, ಬೆಳಗಾವಿ, ತಾಳಗುಪ್ಪ, ಪೊನ್ನಂಪೇಟೆ, ಭಾಗಮಂಡಲ, ಹುಂಚಡಕಟ್ಟೆ, ಮೂಡಿಗರೆ ತಲಾ 5. ಚಿಂಚೋಳಿ, ಕಮಲಾಪುರ, ಸೂಳೆಪೇಟೆ, ತೀರ್ಥಹಳ್ಳಿ ತಲಾ 4. ಗೇರುಸೊಪ್ಪ, ಎಲ್ಲಾಪುರ, ಶಿರಾಲಿ, ನಿಪ್ಪಣಿ, ಮಂಡುಗೋಡು, ಮನ್ಕಿ, ಭಟ್ಕಳ, ಕಾರ್ಕಳ,  ಬೆಳ್ತಂಗಡಿ, ಸೇಡಂ, ಕಲುಬುರಗಿ, ಚಿತ್ತಾಪುರ, ಅರಸಲು, ಶೃಂಗೇರಿ, ಸಾಗರ ಮತ್ತು ಕಳಸ ತಲಾ 2 ಸೆ.ಮೀ ಮಳೆಯಾಗಿದೆ.

ರಾಜ್ಯದ ಕರಾವಳಿ ಭಾಗ, ಉತ್ತರ ಒಳನಾಡಿನ ಅನೇಕ ಸ್ಥಳಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. 

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಬಲವಾಗಿ ಬೀಸುವ ಗಾಳಿಯಿಂದಾಗಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಮತ್ತು 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.