ರಾಜ್ಯದಲ್ಲಿ 149 ಹೊಸ ಕೊರೋನಾ ಪ್ರಕರಣಗಳು, 113 ಅಂತಾರಾಜ್ಯದ ಪ್ರಯಣಿಕರಿಗೆ ಸೋಂಕು

ಬೆಂಗಳೂರು, ಮೇ 19,ರಾಜ್ಯದಲ್ಲಿ ಕೊರೋನಾ ಸೋಂಕಿನ ನಾಗಾಲಾಟ ತೀವ್ರಗೊಂಡಿದೆ. ಕಳೆದ  24 ಗಂಟೆಗಳಲ್ಲಿ 149 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದೆ. ಇದು ಇಲ್ಲಿಯವರೆಗೆ ದಾಖಲಾದ ಒಂದು ದಿನದ ಅತಿ ಹೆಚ್ಚಿನ ಪ್ರಕರಣಗಳಾಗಿವೆ. 149 ಹೊಸ ಸೋಂಕಿತರ ಪೈಕಿ 113 ಮಂದಿ ಅಂತರರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ. ಮಂಡ್ಯದಲ್ಲಿ ದಾಖಲಾಗಿರುವ 71 ಮಂದಿ ಕೂಡ ಮುಂಬೈನಿಂದಲೇ ಆಗಮಿಸಿದ್ದಾರೆ.
ಉಳಿದಂತೆ ದಾವಣಗೆರೆ 22, ಕಲಬುರಗಿ 13, ಶಿವಮೊಗ್ಗ 10, ಬೆಂಗಳೂರು 6, ಚಿಕ್ಕಮಗಳೂರು 5, ಉಡುಪಿಬ 4 ಉತ್ತರ ಕನ್ನಡದಲ್ಲಿ 4, ವಿಜಯಪುರ, ಬೀದರ್, ಗದಗ, ಯದಗಿರಿ, ಚಿತ್ರದುರ್ಗ, ರಾಯಚೂರಿನಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.  ಬೀದರ್ ನಲ್ಲಿ 2 ವರ್ಷ 6 ತಿಂಗಳ ಮಗು ಸೇರಿದಂತೆ ಎಲ್ಲಾ ವಯೋಮಾನದ ಜನರು ಸೋಂಕಿತರ ಪಟ್ಟಿಯಲ್ಲಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1395ಕ್ಕೇರಿಕೆಯಾಗಿದೆ. ಒಟ್ಟು 543 ಮಂದಿ ಗುಣಮುಖರಾಗಿದ್ದು, 811 ಸಕ್ರಿಯ ಪ್ರಕರಣಗಳಿವೆ. ಒಟ್ಟು 41 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.