ಬೆಂಗಳೂರು, ಆಗಸ್ಟ್ 25 ಹವಾಮಾನ ಇಲಾಖೆಯ ಇತ್ತೀಚಿನ ವರದಿಯಂತೆ ಕರಾವಳಿ ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ರಾಜ್ಯದ ಒಳಭಾಗದ ಅನೇಕ ಸ್ಥಳಗಳಲ್ಲಿ ಮಳೆಯಾಗಿದೆ. ಮಳೆಯ ಪ್ರಮಾಣ (ಸೆಂಟಿಮೀಟರ್) ಮಂಕಿ 14, ಹೊನ್ನಾವರ 13, ಶಿರಾಲಿ 9, ಕುಂದಾಪುರ, ಭಟ್ಕಳ 7. ಮಂಗಳೂರು, ಅಂಕೋಲಾ ತಲಾ 5, ಪಣಂಬೂರು, ಮಂಗಳೂರು, ಕುಮಟಾ ತಲಾ 4, ಗೋಕರ್ಣ, ಮಾಣಿ, ಕಾರ್ಕಳ, ಸಿದ್ದಾಪುರ, ಸುಬ್ರಮಣ್ಯ, ಔರಾದ್ ತಲಾ 3, ಯಲ್ಲಾಪುರ, ಕಾರವಾರ, ಕಲ್ಗಟಗಿ, ಲೋಂಡಾ, ಗದಗ, ತುಮಕೂರು, ಭಾಗಮಂಡಲ, ಚಿತ್ರದುರ್ಗ 2 ಸೆಂಟಿಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಭಾನುವಾರ ಬಿಡುಗಡೆಮಾಡಿರುವ ವರದಿ ಹೇಳಿದೆ. ಮುನ್ಸೂಚನೆ ಮಂಗಳವಾರದವರೆಗೆ ಮಾನ್ಯವಾಗಿದೆ: ಕರಾವಳಿ ಕರ್ನಾಟಕದ ಹೆಚ್ಚಿನ ಸ್ಥಳಗಳಲ್ಲಿ ಮತ್ತು ಕರ್ನಾಟಕದ ಒಳಭಾಗದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 20 ಡಿಗ್ರಿ ಸೆಲ್ಸಿಯಸ್ ಇದೆ.