ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ ಅವರ 135ನೇ ಜಯಂತಿ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ

ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ ಅವರ 135ನೇ ಜಯಂತಿ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ  135th birth anniversary and felicitation program of the architect of the Constitution, Dr. B.R. Ambe

ಹುಬ್ಬಳ್ಳಿ 17 : ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ ಅವರ 135ನೇ ಜಯಂತಿ ಹಾಗೂ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಚಿನ್ಮಯ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಿದ್ದಿ   ಸುನೀಲ್  ಗೋಖಲೆ ಕಾಲೇಜಿಗೆ ಪ್ರಥಮ ಸ್ಥಾನ, ಜಿಲ್ಲೆಗೆ 2ನೇ ಸ್ಥಾನ, ರಾಜ್ಯಕ್ಕೆ 9ನೇ ಸ್ಥಾನ ಗಳಿಸಿದ್ದಕ್ಕೆ ಸಿದ್ದಿ ಗೋಖಲೆ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಅಭಿಮಾನದಿಂದ   ಶಾಲು, ಮಾಲಾರೆ​‍್ಣ ಮಾಡಿ, ಗ್ರಂಥ ನೀಡಿ  ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು.

ಅಭಿನಂದಿಸಿ,  ಮುಂದಿನ ಶೈಕ್ಷಣಿಕ ಜೀವನ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಕೋರಿದರು. ಡಾ. ಬಿ.ಆರ್‌.ಅಂಬೇಡ್ಕರ ಅವರ ಪ್ರತಿಮೆಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು ಮಾಲಾರೆ​‍್ಣ ಮಾಡಿ, ಗೌರವ ಸಮರೆ​‍್ಣ ಮಾಡಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ಸಾಹಿತಿ ಪ್ರೊ ಎಸ್‌.ಎಂ.ಸಾತ್ಮಾರ, ಡಾ   ಸುನಿಲ್ ಗೋಖಲೆ ,   ಚಿನ್ಮಯ ಕಾಲೇಜಿನ ಗ್ರಂಥಪಾಲಕ   ಚಂದ್ರಶೇಖರ್ ಚನ್ನಂಗಿ, ಸುಜಯ್ ಸುರೇಶ ಹೊರಕೇರಿ ಸೋಹನ ಸುರೇಶ ಹೊರಕೇರಿ  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ,  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ,

ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಗಣಪತಿ ಸ್ವಾದಿ , ಸುಭಾಸ್ ಚವ್ಹಾಣ , ಚನ್ನಬಸಪ್ಪ   ಧಾರವಾಡಶೆಟ್ಟರ್,   ಡಾ. ಬಸವಕುಮಾರ ತಲವಾಯಿ,  ಮುಂತಾದವರು  ಇದ್ದರು.ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ   ಅವರು ಮಾತನಾಡಿ  ಕೆಎಂಸಿಆರ್‌ಐ 24 ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತರಾದ ಸಕ್ಷಮ ಉತ್ತರ ಪ್ರಾಂತ್ಯದ ಅಧ್ಯಕ್ಷರು, ಸ್ವತಃ ದೃಷ್ಟಿದೋಷ ಹೊಂದಿದ್ದರು, ದಿವ್ಯಾಂಗರ ಏಳಿಗೆಗೆ ಶ್ರಮಿಸುತ್ತಿರುವ, ಸಮಾಜ ಮುಖಿ ಚಿಂತನೆವುಳ್ಳ, ಕ್ರೀಯಾಶೀಲ ವೈದ್ಯರಾದ ಡಾ. ಸುನೀಲ ಗೋಕಲೆ ಅವರ ಮಗಳು ಸಿದ್ದಿ ಗೋಖಲೆ ಎಂದು ಹೇಳಿದರು. ಡಾ.ಬಿ.ಆರ್‌.ಅಂಬೇಡ್ಕರ ಅವರ ಜೀವನ ಹಾಗೂ ಸಾಧನೆ, ಭಾರತದ ಸಂವಿಧಾನ ರಚನೆಯಲ್ಲಿ ಅವರ ಪಾತ್ರ ಕುರಿತು ನುಡಿಗಳ ಮೂಲಕ ಗುಣಗಾನ ಮಾಡಿದರು.