ಔರಂಗಾಬಾದ್, ಮೇ 25,ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಹೊಸದಾಗಿ 16 ಕರೊನ ಸೋಂಕು ಪ್ರಕರಣ ವರದಿಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1300 ದಾಟಿದೆ. ಕಳೆದ 24 ಗಂಟೆಗಳಲ್ಲಿ 16 ಹೊಸ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಿಸಿದೆ.ಹೊಸದಾಗಿ 16 ರೋಗಿಗಳಲ್ಲಿ 10 ಮಹಿಳೆಯರು ಮತ್ತು ಆರು ಪುರುಷರು ಸೇರಿದ್ದಾರೆ .ಜಿಲ್ಲೆಯಲ್ಲಿ ಇದುವರೆಗೆ 48 ಸಾವುಸಂಭವಿಸಿವೆ ಮತ್ತು 619 ಜನರು ಚೇತರಿಸಿಕೊಂಡಿದ್ದಾರೆ, 632 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆಡಳಿತ ತಿಳಿಸಿದೆ.