ಹಾಸನದಲ್ಲಿ ಮತ್ತೆ 13 ಕೋವಿಡ್‌- 19 ಪ್ರಕರಣ ಪತ್ತೆ; ಸೋಂಕಿತರ ಸಂಖ್ಯೆ 157ಕ್ಕೆ ಏರಿಕೆ

ಹಾಸನ, ಮೇ 30,ಜಿಲ್ಲೆಯಲ್ಲಿ ಹೊಸದಾಗಿ 13 ಕೋವಿಡ್‌- 19  ಪ್ರಕರಣಗಳು ಪತ್ತೆ ಯಾಗಿದ್ದು, ಸೋಂಕಿತರ ಸಂಖ್ಯೆ 157 ಕ್ಕೆ ಏರಿಕೆಯಾಗಿದೆ.ಇಂದು ಪತ್ತೆಯಾಗಿರುವ ಪ್ರಕರಣಗಳಲ್ಲಿ 6 ಆಲೂರು ತಾಲ್ಲೂಕಿಗೆ ಸೇರಿದ್ದು, 7 ಮಂದಿ  ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದವರಾಗಿದ್ದಾರೆ.ಆಸ್ಪತ್ರೆಯಿಂದ 30 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಗಳಲ್ಲಿ 127  ಸಕ್ರಿಯ ಕೋವಿಡ್‌ - 19 ಪ್ರಕರಣ ಇದ್ದು, ಎಲ್ಲಾ ಸೋಂಕಿತರನ್ನು ಆಸ್ಪತ್ರೆಯಲ್ಲಿ  ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್ .ಗಿರೀಶ್ ತಿಳಿಸಿದ್ದಾರೆ.