ವಾರಣಾಸಿಯಲ್ಲಿ ನಾಳೆ ೧, ೨೦೦ ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ವಾರಣಾಸಿ, ಫೆ ೧೫ :    ಪ್ರಧಾನಿ ನರೇಂದ್ರ ಮೋದಿ   ಅವರು   ತಮ್ಮ  ಸ್ವಕ್ಷೇತ್ರ  ಉತ್ತರ ಪ್ರದೇಶದ  ವಾರಣಾಸಿಯಲ್ಲಿ  ಭಾನುವಾರ   ಸುಮಾರು ೧,೨೦೦ ಕೋಟಿ ರೂಪಾಯಿ  ವೆಚ್ಚದ  ವಿವಿಧ ಅಭಿವೃದ್ದಿ ಯೋಜನೆಗಳನ್ನು  ಉದ್ಘಾಟಿಸಲಿದ್ದಾರೆ.   ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್,  ಹಲವು ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರು,    ಪ್ರಧಾನಿ ಮೋದಿ  ಅವರ ದೇಗಲ ನಗರಿಯ ಭೇಟಿ ಸಂದರ್ಭದಲ್ಲಿ   ಹಾಜರಿರಲಿದ್ದಾರೆ..ಬನಾರಸ್  ಹಿಂದೂ ವಿಶ್ವ ವಿದ್ಯಾಲಯ  ಬಳಿ  ೪೩೦ ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ,  ಪಂಡಿತ್  ದೀನ್ ದಯಾಳ್ ಉಪಾಧ್ಯಾಯ  ಸ್ಮಾರಕ ಕೇಂದ್ರ ಹಾಗೂ ನೆರೆಯ  ಚಂದೌಲಿ ಜಿಲ್ಲೆಯಲ್ಲಿ  ೬೩ ಅಡಿ ಎತ್ತರದ  ದೀನ್ ದಯಾಳ್ ಉಪಾಧ್ಯಾಯ ಅವರ ಪ್ರತಿಮೆ  ಅನಾವರಣ ಸೇರಿದಂತೆ  ೪೮ ಯೋಜನೆಗಳ ಉದ್ಘಾಟನೆ ಹಾಗೂ  ಲೋಕಾರ್ಪಣೆಯನ್ನು   ನೆರವೇರಿಸಲಿದ್ದಾರೆ.ದೇಶದಲ್ಲಿಯೇ   ಅತಿದೊಡ್ಡ  ದೀನ್ ದಯಾಳ್ ಉಪಾಧ್ಯಾಯ  ಅವರ ಈ  ಪ್ರತಿಮೆಯನ್ನು  ೨೦೦ಕ್ಕೂ  ಹೆಚ್ಚು  ಕಲಾವಿದರು   ಕಳೆದೊಂದು ವರ್ಷದಿಂದ  ಹಗಲು ರಾತ್ರಿ ಶ್ರಮಿಸಿ ರೂಪಿಸಿದ್ದಾರೆ.  ಸ್ಮಾರಕ ಕೇಂದ್ರ  ಉಪಾಧ್ಯಾಯ ಅವರ  ಜೀವನ ಹಾಗೂ ಇತಿಹಾಸವನ್ನು ಒಳಗೊಂಡಿರಲಿದೆ.ಪ್ರಧಾನಿ ಮೋದಿ  ಭಾನುವಾರ  ವಿಡಿಯೋ ಕಾನ್ಫರೆನ್ಸ್  ಮೂಲಕ   ಐ ಆರ್ ಸಿ ಟಿ ಸಿ  ಕಾರ್ಯಾಚರಣೆ ನಡೆಸಲಿರುವ  ಮೂರನೇ  ಖಾಸಗಿ  ರೈಲು “ಮಹಾ  ಕಾಲ್ ಎಕ್ಸ್ ಪ್ರೆಸ್ ಗೆ    ಹಸಿರು ನಿಶಾನೆ ತೋರಿಸಲಿದ್ದಾರೆ.  ಉತ್ತರ ಪ್ರದೇಶದ  ವಾರಣಾಸಿ, ಮಧ್ಯ ಪ್ರದೇಶದ ಉಜ್ಜೈನ್  ಹಾಗೂ ಓಂಕಾರೇಶ್ವರದಲ್ಲಿರುವ  ಮೂರು ಜ್ಯೋರ್ತಿಲಿಂಗ  ಕ್ಷೇತ್ರಗಳಿಗೆ  ಈ ರೈಲು ಸಂಪರ್ಕ ಕಲ್ಪಿಸಲಿದೆ.