ಹರಿಯಾಣ ಚುನಾವಣಾ ಕಣದಲ್ಲಿ 117 ಕ್ರಿಮಿನಲ್ ಅಭ್ಯರ್ಥಿಗಳು

ನವದೆಹಲಿ, ಅ 16:    ಇದೇ ತಿಂಗಳ 21 ರಂದು ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹರಿಯಾಣದಲ್ಲಿ  ರಾಜಕೀಯ ನಾಯಕರ ಪ್ರಚಾರ ಕಾರ್ಯ ದಿನೆ ದಿನೇ  ಕಾವು ಪಡೆದುಕೊಳ್ಳುತ್ತಿದೆ. ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ 117 ಜನ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ. 

ಇವರ ಪೈಕಿ  70 ಜನರ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾದ ಪ್ರಕರಣಗಳು  ದಾಖಲಾಗಿವೆ. ಈ ವಿಚಾರವನ್ನು ಹರಿಯಾಣ  ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ ಬಹಿರಂಗಪಡಿಸಿದೆ. 

ಚುನಾವಣಾ  ಕಣದಲ್ಲಿ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವವರು ಈ ಬಾರಿ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 

ಕಣದಲ್ಲಿರುವ ಒಟ್ಟು 1169 ಅಭ್ಯರ್ಥಿಗಳ ಪೈಕಿ 1138 ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಕೆಯ ವೇಳೆ ನೀಡಿರುವ ಪ್ರಮಾಣ ಪತ್ರದ  ಪರಿಶೀಲನೆಯ ಬಳಿಕ ಎಡಿಆರ್. ಈ ಮಾಹಿತಿಯನ್ನು ಹೊರಹಾಕಿದೆ. ಇನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಸ್ಪರ್ಧಿಸುತ್ತಿರುವ ಒಟ್ಟು 87 ಅಭ್ಯರ್ಥಿಗಳ ಪೈಕಿ 13 ಅಭ್ಯರ್ಥಿಗಳ ಮೆಲೆ ವಿವಿಧ ರೀತಿಯ ಕ್ರಿಮಿನಲ್ ಪ್ರಕರಣಗಳಿದ್ದರೆ, ಬಿ.ಎಸ್.ಪಿ.ಯ ಒಟ್ಟು 86 ಅಭ್ಯರ್ಥಿಗಳಲ್ಲಿ 12 ಜನ ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದಾರೆ ಎಂದು ಸಂಸ್ಥೆ ಬಹಿರಂಗಪಡಿಸಿದೆ.