ರೈತ ಹಿತರಕ್ಷಣಾ ಪೆನಲ್‌ನ 11 ಜನ ಆಯ್ಕೆ

11 members of farmer welfare panel selected

ಕಾಗವಾಡ, 17; ತೀವೃ ಕೂತುಹಲ ಮೂಡಿಸಿದ್ದ ಶತಮಾನೋತ್ಸವ ಕಂಡ ಪಟ್ಟಣದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆಯಲ್ಲಿ ಜ್ಯೋತಿಕುಮಾರ ಪಾಟೀಲ ಹಾಗೂ ಕಾಕಾಸಾಬ ಪಾಟೀಲ ನೇತೃತ್ವದ ರೈತ ಹಿತ ರಕ್ಷಣಾ ಪೆನಲ್‌ನ 11 ಜನ ಚುನಾಯಿತರಾಗುವ ಮೂಲಕ ತಮ್ಮ ಸಹಕಾರಿಯ ಅಧಿಕಾರವನ್ನು ಪಡೆದುಕೊಂಡಿದ್ದಾರೆ. 

ಫೆ. 1 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ರವಿವಾರ ದಿ. 16 ರಂದು ಪೋಲಿಸರ ಬೀಗಿ ಬಂದೋಬಸ್ತನಲ್ಲಿ ನಡೆಯಿತು. ಮುಖಂಡ ಜ್ಯೋತಿಗೌಡ ಪಾಟೀಲ ಹಾಗೂ ಸ್ವಪ್ನಿಲ(ಕಾಕಾ) ಪಾಟೀಲ ಅವರ ನೇತೃತ್ವದ ರೈತ ಹಿತರಕ್ಷಣಾ ಪೆನಲ್ 12 ಸದಸ್ಯರ ಪೈಕಿ 11 ಸದಸ್ಯರು ಆಯ್ಕೆಯಾಗಿ ಒಬ್ಬ ಸದಸ್ಯ ಮಾತ್ರ ಪರಾಭವಗೊಂಡರು. ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಅಭಿಮಾನಿಗಳು ಗುಲಾಲ ಎರಚಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು. 

ರೈತ ಹಿತರಕ್ಷಣಾ ಪೆನಲ್‌ದಿಂದ ಸ್ವಪ್ನಿಲ ಪಾಟೀಲ್, ಪದ್ಮಾಕರ ಕರವ, ಶಾಂತಿನಾಥ ಮಾಲಗಾಂವೆ, ಬಸಗೌಡಾ ಪಾಟೀಲ, ರಾವಸಾಬ ಚೌಗಲಾ, ಸುವರ್ಣಾ ಪಾಟೀಲ, ರೂಪಾಲಿ ಪವಾರ, ಖಾಹಾಸಾಬ ಮುಲ್ಲಾ, ಅಪ್ಪಾಸಾಬ ಗುಮಟೆ, ಅನೀಲ ಭಜಂತ್ರಿ, ಲಕ್ಕಪ್ಪಾ ಕೋಳಿ ವಿಜಯಶಾಲಿಯಾದರು. ಇನ್ನೂ ರೈತ ಅಭಿವೃದ್ಧಿ ಪೆನಲ್‌ನ ಭಾರತಿ ಸುರೇಶ ಚೌಗಲಾ ಓರ್ವ ಸದಸ್ಯೆ ಮಾತ್ರ ಬಿನ್ ಸಾಲಗಾರ ಕ್ಷೇತ್ರದಿಂದ ಜಯ ಸಾಧಿಸಿದರು. 

ಈ ವೇಳೆ ಮಾತನಾಡಿದ ಮುಖಂಡ ಜ್ಯೋತಿಕುಮಾರ ಪಾಟೀಲ ಕಳೆದ ಐದು ವರ್ಷಗಳಿಂದ ಮಾಡಿದ ಕಾರ್ಯವನ್ನು ಮನದಲ್ಲಿಟ್ಟು, ರೈತರು ನಮಗೆ ಮತ್ತೆ ಐದು ವರ್ಷಗಳ ಅವಧಿಗೆ ಮರು ಆಯ್ಕೆ ಮಾಡಿದ್ದಾರೆ. ಅವರ ಋಣ ಯಾವತ್ತೂ ಮರೆಯದೆ ಯಾವದೇ ರೀತಿ ಪಕ್ಷ ಭೇದ, ತಾರತಮ್ಯ ಮಾಡದೇ ಎಲ್ಲ ರೈತರ ಹಿತ ಕಾಪಾಡುವ ಕೆಲಸ ಮಾಡುತ್ತೇವೆ ಎಂದರು. 

ಸ್ವಪ್ನಿಲ್ (ಕಾಕಾ)ಪಾಟೀಲ ಮಾತನಾಡಿ, ಈ ಗೆಲುವು ಸತ್ಯಕ್ಕೆ ಸಿಕ್ಕ ಗೆಲುವಾಗಿದ್ದು, ರೈತರ ಸಹಕಾರವನ್ನು ನಾವು ಪ್ರೀತಿ ಪೂರ್ವಕವಾಗಿ ಸ್ವಾಗತ ಮಾಡಿಕೊಳುತ್ತೇವೆ. ಪಾರದರ್ಶಕವಾಗಿ ಆಡಳಿತ ನಡೆಸಿದ್ದಕ್ಕಾಗಿ ಈ ಅಭೂತಪೂರ್ವ ಜಯ ದೊರೆತಿದೆ ಎಂದು ಹೇಳಿದರು. 

ಚುನಾವಣಾಧಿಕಾರಿಯಾಗಿ ಅಥಣಿ ಸಹಕಾರ ಅಭಿವೃದ್ಧಿ ಅಧಿಕಾರಿ ಆರ್‌.ಎನ್‌. ನೂಲಿ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಈ ವೇಳೆ ಸೌರಭ ಪಾಟೀಲ, ಪ್ರಕಾಶ ಪಾಟೀಲ, ರಾಜು ಕರವ, ವಿಲಾಸ ಮಿರ್ಜೆ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.