ಸಿಯೋಲ್, ಜೂನ್ 4, ದಕ್ಷಿಣ ಕೊರಿಯಾದಲ್ಲಿ ಕಳದೆ 24ಗಂಟೆಗಳ ಅವಧಿಯಲ್ಲಿ 39 ಹೊಸ ಕರೋನ ಪ್ರಕರಣ ವರದಿಯಾಗಿದ್ದು, ಪರಿಣಾಮ ಇದರಿಂದಾಗಿ ದೇಶದಲ್ಲಿ ಈವರೆಗೆ ಸೋಂಕಿತರ 11,629 ಕ್ಕೆ ಏರಿಕೆಯಾಗಿದೆ.ಮೆಟ್ರೋಪಾಲಿಟನ್ ಪ್ರದೇಶದಲ್ಲಿನ ಧಾರ್ಮಿಕ ಕೂಟಗಳಿಂದಾಗಿ 30 ಕ್ಕಿಂತಲೂ ಹೆಚ್ಚು ಪ್ರಕರಣ ವರದಿಯಾಗಿದೆ. ಹೊಸ ಪ್ರಕರಣಗಳಲ್ಲಿ ಆರು ವಿದೇಶಗಳಿಂದ ಆಮದು ಪ್ರಕರಣವಾಗಿದೆ. ಆದರೂ ಹೆಚ್ಚಿನ ಸಾವು ದೃಡಪಟ್ಟಿಲ್ಲವಾದರೂ ಈ ವರೆಗೆ ಮೃತಪಟ್ಟವರ ಸಂಖ್ಯೆ 273 ಕ್ಕೆ ತಲುಪಿದ್ದು, ಸಾವಿನ ಪ್ರಮಾಣವು ಶೇಕಡಾ 2.35 ರಷ್ಟಿದೆ.ಸಂಪೂರ್ಣ ಚೇತರಿಕೆಯಾದ ನಂತರ 32 ರೋಗಿಗಳನ್ನು ಸಂಪರ್ಕತಡೆಯಿಂದ ಬಿಡುಗಡೆ ಮಾಡಲಾಗಿದ್ದು, ಈ ವರೆಗೆ ಗುಣಮಖರಾದವರ ಸಂಖ್ಯೆ 10,499 ಕ್ಕೆ ಏರಿಕೆಯಾಗಿದ್ದು, ಒಟ್ಟು ಚೇತರಿಕೆ ದರ 90.3 ಕ್ಕೆ ಏರಿಕೆಯಾಗಿದೆ. ಜನವರಿ 3 ರಿಂದ, ದೇಶವು 973,000 ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು ಅವರ ಪೈಕಿ 934,030 ಜನರಲ್ಲಿ ಯಾವುದೇ ಸೋಂಕು ಕಾಣಿಸಿಲ್ಲ ಎಂದೂ ಹೇಳಲಾಗಿದೆ.