ನವದೆಹಲಿ, ಏ 22 ಬಿ ಅಮಿತಾಭ್ ಬಚ್ಚನ್ ಹಾಗೂ ನಟಿ ತಾಪ್ಸಿ ಪನ್ನು ನಟನೆಯ 'ಬದ್ಲಾ' ಚಿತ್ರ ದೇಶಾದ್ಯಂತ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಜೊತೆಗೆ, ಐದನೇ ವಾರಾಂತ್ಯದಲ್ಲೇ 100 ಕೋಟಿ ರೂ.ಗಳ ಕ್ಲಬ್ ಗೆ ಸೇರ್ಪಡೆಯಾಗಿದೆ. ಸುಜಯ್ ಘೋಷ್ ನಿದರ್ೆಶನದ ಬದ್ಲಾ ಚಿತ್ರ ಕಳೆದ ಶುಕ್ರವಾರ 8 ಲಕ್ಷ ರೂ., ಶನಿವಾರ 9 ಲಕ್ಷ ರೂ., ಹಾಗೂ ಶನಿವಾರ 13 ಲಕ್ಷ ರೂ. ಸೇರಿ ಮೂರು ದಿನದಲ್ಲೇ 30 ಲಕ್ಷ ರೂ. ಕಲೆ ಹಾಕಿದೆ. ಇಲ್ಲಿಯವರೆಗೆ ಚಿತ್ರದ ಸಂಗ್ರಹ 103.86 ಕೋಟಿ ರೂ. ದಾಟಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, ಕೊಲೆಯ ಸುಳಿಗೆ ಸಿಲುಕಿದ ತಾಪ್ಸಿ ಪನ್ನು ಪಾತ್ರವಾದ ನಯನ ಸುತ್ತ ಸುತ್ತುವರಿಯುತ್ತದೆ. ನಯನ ಅವರ ವಕೀಲರಾಗಿರುವ ಅಮಿತಾಭ್, ಬಾದಲ್ ಗುಪ್ತ ಪಾತ್ರದಲ್ಲಿ 'ಪಿಂಕ್' ಚಿತ್ರದ ಮ್ಯಾಜಿಕ್ ಅನ್ನು ಮರುಕಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಅಮೃತಾಸಿಂಗ್, ಟೋನಿ ಲ್ಯೂಕ್, ಮಾನವ್ ಕೌಲ್ ಮತ್ತಿತರರಿದ್ದಾರೆ.