ಬೆಂಗಳೂರು, ಮೇ 11, ರಾಜ್ಯದಲ್ಲಿ ಭಾನುವಾರ ಸಂಜೆ 5 ಗಂಟೆಯಿಂದ ಸೋಮವಾರ ಮಧ್ಯಾಹ್ನದ ವೇಳೆಗೆ 10 ಜನರಿಗೆ ಸೋಂಕು ತಗುಲಿದ್ದು ಒಟ್ಟು ಸೋಂಕಿತರ ಸಂಖ್ಯೆ 858 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಈವರೆಗೆ 31 ಜನರು ಸೋಂಕಿನೀಂದ ಮೃತಪಟ್ಟಿದ್ದು 422 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ವಾಪಸ್ಸಾಗಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ.ದಾವಣಗೆರೆಯಲ್ಲಿ ಮೂರು, ಬಾಗಲಕೋಟೆ ಮತ್ತು ಬೀದರ್ ನಲ್ಲಿ ತಲಾ ಎರಡು ಹಾಗೂ ಕಲಬುರಗಿ, ಹಾವೇರಿ, ವಿಜಯಪುರಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ಕೋವಿಡ್ – 19 ಕುರಿತ ಹೆಚ್ಚಿನ ಮಾಹಿತಿಗೆ ಆಪ್ತಮಿತ್ರ ಸಹಾಯವಾಣಿ ಸಂಖ್ಯೆ 14410 ಮತ್ತು 9745697456 ಸಂಪರ್ಕಿಸಬಹುದು.