ಬೆಂಗಳೂರು, ಮಾ 28, ರಾಜ್ಯದಲ್ಲಿ ಕಳೆದ ರಾತ್ರಿಯಿಂದ ಒಟ್ಟು 10 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 74ಕ್ಕೇರಿಕೆಯಾಗಿದೆ. ಇದುವರೆಗೆ ಸೋಂಕಿನಿಂದ ಮೂವರು ಮೃತಪಟ್ಟಿದ್ದು, ಐವರು ಗುಣಮುಖರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ 54 ವರ್ಷದ ಮಹಿಳೆ, 28 ವರ್ಷ ಮತ್ತು 23 ವರ್ಷದ ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ.ವಿತ್ತೀಚೆಗೆ ಲಂಡನ್ ನಿಂದ ಮರಳಿದ್ದ ಬೆಂಗಳೂರಿನ 21 ವರ್ಷದ ಯುವಕನೋರ್ವನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ಇಂದು ಐದು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಆಂಧ್ರಪ್ರದೇಶದ ಹಿಂದುಪುರದ 23 ವರ್ಷದ ಯುವಕ, 70 ವರ್ಷದ ವೃದ್ಧ, 32 ವರ್ಷದ ಮಹಿಳೆ, 38 ವರ್ಷದ ಪುರುಷ, 18 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಇದರ ಜೊತೆಗೆ, ಲಂಡನ್ ನಿಂದ ಮರಳಿದ್ದ 63 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರಿಗೆ ವಿವಿಧ ಆಸ್ಪತ್ರೆಗಳ ಪ್ರತ್ಯೇಕಗೊಳಿಸಿದ ಕೊಠಡಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.