ಮಲೇಷ್ಯಾ ಭಕ್ತನಿಂದ ಟಿಟಿಡಿಗೆ 10 ಲಕ್ಷ ರೂ. ದೇಣಿಗೆ

ತಿರುಮಲ, ಅ 11:   ಮಲೇಷ್ಯಾ ಮೂಲದ ರವೀದ್ರ ಸುಬ್ರಮಣಿಯನ್ ಟಿಟಿಡಿ ವತಿಯಿಂದ ನಡೆಸುತ್ತಿರುವ ಶ್ರೀ ವೆಂಕಟೇಶ್ವರ ಸರ್ವ ಶ್ರೇಯಸ್ ಟ್ರಸ್ಟ್ ಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. 

ದೇವಾಲಯ ಸಂಕೀರ್ಣದೊಳಗಿನ ರಂಗನಾಯಕುಲ ಮಂಟಪದಲ್ಲಿ ಟಿಟಿಡಿ ಟ್ರಸ್ಟ್ ಬೋರ್ಡ್ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ, ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ ವಿ ಧರ್ಮ ರೆಡ್ಡಿ ಅವರಿಗೆ ದೇಣಿಗೆ ನೀಡಿದ ಮೊತ್ತಕ್ಕೆ ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಹಸ್ತಾಂತರಿಸಿದರು. 

ಪ್ರತ್ಯೇಕ ದೇಣಿಗೆಯಲ್ಲಿ, ಬೆಂಗಳೂರಿನ ಟಿಟಿಡಿ ಟ್ರಸ್ಟ್ ಬೋರ್ಡ್ ವಿಶೇಷ ಆಹ್ವಾನಿತ, ಕುಪೇಂದರ್ ರೆಡ್ಡಿ ಅವರು ಟಿಟಿಡಿಗಾಗಿ ನಾಲ್ಕು ಚಕ್ರದ 2 ವಾಹನಗಳನ್ನು ದಾನ ಮಾಡಿದ್ದಾರೆ. 

ಪ್ರತಿ ಮಹೀಂದ್ರಾ ಐತುರಾಸ್ ವಾಹನ ವೆಚ್ಚ 35 ಲಕ್ಷ ರೂ.ಗಳಾಗಿದ್ದು, ವಾಹನಗಳ ಕೀಲಿಗಳನ್ನು ಧರ್ಮ ರೆಡ್ಡಿ ಅವರಿಗೆ ಶ್ರೀವಾರಿ ದೇವಸ್ಥಾನದ ಮುಂದೆ ಹಸ್ತಾಂತರಿಸಲಾಗಿದೆ.