10 ಶೆಷ್ಯೂಲ್ಡ್‌ ತಿದ್ದುಪಡಿ ವಿಚಾರ: ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಅಭಿಪ್ರಾಯ ಸಲ್ಲಿಕೆ-ಡಿ.ಕೆ‌.ಶಿವಕುಮಾರ್

ಬೆಂಗಳೂರು, ಮೇ 28, ಪಕ್ಷಾಂತರ ನಿಷೇಧ ಕಾಯಿದೆಗೆ ಸಂಬಂಧಿಸಿದಂತೆ ಭಾರತ ಸಂವಿಧಾನ ಹತ್ತನೇ  ಅನುಸೂಚಿಯಲ್ಲಿ ಪೀಠಾಸೀನ ಅಧಿಕಾರಿಗಳಿಗೆ ಲಭ್ಯವಿರುವ ಅಧಿಕಾರಗಳುಮತ್ತದರಡಿಯಲ್ಲಿ  ರಚಿಸಲಾದ ನಿಯಮಗಳ ಮರುಪರಿಶೀಲನೆ ಸಂಬಂಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ  ಕರೆದಿದ್ದ ಸಭೆಗೆ ಪಕ್ಷದ ಹಿರಿಯ ನಾಯಕರೊಡನೆ ಚರ್ಚಿಸಿ ಅಭಿಪ್ರಾಯ ಸಲ್ಲಿಸುವುದಾಗಿ  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ‌.ಸಭೆ ಬಳಿಕ  ಸುದ್ದಿಗಾರರೊಂದಿಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಕ್ಷಾಂತರ ಕಾಯ್ದೆ ವಿಚಾರದಲ್ಲಿ  ಸುಪ್ರೀಂ ಕೋರ್ಟ್ ಕೊಟ್ಟ ಸಲಹೆಗಳು, ರಾಜ್ಯದಲ್ಲಿ ಆಗುತ್ತಿರುವ ವ್ಯಾಪಕ ಚರ್ಚೆ ಬಗ್ಗೆ  ಸಮಿತಿ ರಚನೆ ಆಗಿದ್ದು, ಅದರ ಬಗ್ಗೆ ಅಭಿಪ್ರಾಯ ಪಡೆಯಲು ಸಭೆ ನಡೆಯಿತು.
ಅಧಿಕಾರದಾಸೆಗೆ  ಬೇರೆ ಪಕ್ಷಕ್ಕೆ ವಲಸೆ ಹೋಗುವುದು ನಡೆಯಬಾರದು ಎಂದು ಸಭೆಯಲ್ಲಿ ತಿಳಿಸಿದ್ದೇವೆ. ಈ  ಸಂಬಂಧ ತಾವೂ ಕೂಡ ಪಕ್ಷದ ಹಿರಿಯರ ಸಭೆ ಕರೆದು ಚರ್ಚಿಸಿ ಅವರ ಅಭಿಪ್ರಾಯ ಪಡೆದು  ಜೂನ್ 10ನೇ ತಾರೀಖಿನ ಒಳಗೆ ತಿಳಿಸುವುದಾಗಿ ಹೇಳಿದರು.ಇಂದಿನ ಸಚಿವ ಸಂಪುಟ ಸಭೆಯಲ್ಲಿ ಗ್ರಾಮ ಪಂಚಾಯತಿಗಳಿಗೆ ನಾಮನಿರ್ದೇಶನ ಬಗ್ಗೆ  ಮುಖ್ಯಮಂತ್ರಿಗಳು ಚರ್ಚೆ ನಡೆಸಲಿದ್ದಾರೆ. ಆದರೆ  ಇದು ನಿಮಗೂ ಒಳ್ಳೆಯದಲ್ಲ, ರಾಜ್ಯಕ್ಕೆ ಒಳ್ಳೆಯದಲ್ಲ. ಸರ್ಕಾರ ಇದೇ ರೀತಿ  ಮುಂದುವರಿದರೆ  ಅದರ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಸಿದರು.