ಟೆಕ್ಸಾಸ್ ನಲ್ಲಿ ಒಂದೇ ದಿನ ದಾಖಲೆಯ 10,028 ಹೊಸ ಪ್ರಕರಣ

ಎಲ್ ಪಾಸೊ, ಜುಲೈ 8 (ಸ್ಪುಟ್ನಿಕ್) ಅಮೆರಿಕದ ಟೆಕ್ಸಾಸ್ ನಲ್ಲಿ   ಒಂದೇ ದಿನ 10,028 ಹೊಸ ಕರೋನ ಸೋಂಕು ಪ್ರಕರಣಗಳು ವರದಿಯಾಗಿ ದಾಖಲೆ ಬರೆದಿದೆ ಎಂದು ಟೆಕ್ಸಾಸ್ ರಾಜ್ಯ ಆರೋಗ್ಯ ಸೇವೆಗಳ ಇತ್ತೀಚಿನ ಮಾಹಿತಿ ತಿಳಿಸಿದೆ. 

ಅಮೆರಿಕದ  ನಗರಗಳಲ್ಲಿ  ಸೋಂಕು  ಹೆಚ್ಚುತ್ತಿರುವುದು ಜನತೆಯಲ್ಲಿ  ಬಹಳ ತಲ್ಲಣ ಉಂಟು ಮಾಡುತ್ತಿದೆ.  ಮಂಗಳವಾರ ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ  ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಸಹ  9,286 ಕ್ಕೆ ಏರಿಕೆಯಾಗಿದೆ. 

ಇಲ್ಲಿಯವರೆಗೆ, ಟೆಕ್ಸಾಸ್ ರಾಜ್ಯದಾದ್ಯಂತ 210,585 ಕರೋನ  ಪ್ರಕರಣಗಳು ದಾಖಲಾಗಿದ್ದು 2,715 ಸೋಂಕು  ಸಂಬಂಧಿತ ಸಾವುಗಳು ಸಂಭವಿಸಿವೆ.

ಸೋಂಕು  ಹರಡುವುದನ್ನು ತಡೆಯಲು ರಾಜ್ಯದ  ಸಾರ್ವಜನಿಕವಾಗಿ ಮಾಸ್ಕ್ ದರಿಸುವಂತೆ  ಗುರುವಾರ ಗೌರ್ನರ್ ಅಬಾಟ್  ಹೊಸದಾಗಿ ಆದೇಶ ಹೊರಡಿಸಿದ್ದಾರೆ.