ಕೊರೋನಾ ಪರಿಹಾರಕ್ಕೆ ಡಿಎಂಕೆಯಿಂದ 1 ಕೋಟಿ ರೂ. ನೆರವು

ಚೆನ್ನೈ, ಮಾ 30,ಕೋವಿಡ್ -19 ವಿರುದ್ಧದ ಹೋರಾಟಕ್ಕೆ ತಮಿಳುನಾಡಿನ ಡಿಎಂಕೆ ಪಕ್ಷ 1 ಕೋಟಿ ರೂ. ನೆರವು ಘೋಷಿಸಿದೆ. ಈ  ಹಣವನ್ನು ಡಿಎಂಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುಖ್ಯಮಂತ್ರಿಗಳ ಸಾರ್ವಜನಿಕ ನಿಧಿಗೆ  ನೀಡಲಾಗುವುದು ಎಂದು ಪಕ್ಷದ ಮುಖಂಡ ಹಾಗೂ ವಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್  ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಹಣವನ್ನು ಆನ್ ಲೈನ್ ಮೂಲಕ ಪಾವತಿ ಮಾಡಲಾಗುವುದು.  ಜೊತೆಗೆ, ಪಕ್ಷದ ಎಲ್ಲಾ ಸಂಸದರು ಮತ್ತು ಶಾಸಕರು ತಮ್ಮ ಒಂದು ದಿನದ ವೇತನವನ್ನು  ನೀಡಲಿದ್ದಾರೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.