ಸಾಂಟಿಯಾಗೋ, ಜೂ 3,ಚಿಲಿಯಲ್ಲಿ 1,08,686 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು 1,188 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಮಂಗಳವಾರ ರಾತ್ರಿ 9 ಗಂಟೆಗೆ ಲಭ್ಯವಾದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 3,527 ಹೊಸ ಪ್ರಕರಣಗಳು ಪತ್ತೆಯಾಗಿದೆ. ಒಂದೇ ದಿನ 75 ಜನರು ಮೃತಪಟ್ಟಿದ್ದು ಒಂದೇ ದಿನದ ಅತಿ ಹೆಚ್ಚಿನ ಸಾವಿನ ಪ್ರಕರಣವಾಗಿದೆ ಹೊಸದಾಗಿ ಸೋಂಕು ದೃಢಪಟ್ಟವರ ಪೈಕಿ 3,206 ಜನರಲ್ಲಿ ಸೋಂಕಿನ ಲಕ್ಷಣಗಳಿದ್ದು 321 ಜನರಲ್ಲಿ ಯಾವುದೇ ಲಕ್ಷಣಗಳಿರಲಿಲ್ಲ.ಮೃತಪಟ್ಟ ಕೆಲವರ ಕೊರೊನಾ ಸೋಂಕು ಪರೀಕ್ಷಾ ಅವಧಿ ಅವರು ಸಾವನ್ನಪ್ಪಿದ ಬಳಿಕ ಲಭ್ಯವಾಗಿದ್ದು ಕೋವಿಡ್ - 19 ಸಾವುಗಳ ಬಗ್ಗೆ ದಾಖಲಿಸುವ ವಿಧಾನವನ್ನು ಸರ್ಕಾರ ಬದಲಿಸಿದೆ ಎಂದು ಆರೋಗ್ಯ ಸಚಿವ ಜೈಮೆ ಮನಾಲಿಚ್ ಹೇಳಿದ್ದಾರೆ.ಜೂನ್ 5 ರವರೆಗೆ ರಾಜಧಾನಿ ಸಾಂಟಿಯಾಗೋ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಲಾಕ್ ಡೌನ್ ವಿಸ್ತರಿಸಲಾಗಿದೆ. ದಿಗ್ಬಂಧನ ವಿಸ್ತರಣೆಯಿಂದಾಗಿ ಬಡವರ ಜೀವನ ಇನ್ನಷ್ಟು ದುಃಸ್ತರವಾಗಿದ್ದು, ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂದು ಅನೇಕ ಪ್ರತಿಭಟನೆಗಳು ನಡೆದಿವೆ.