ಕತಕನಹಳ್ಳಿಯ ಎಮ್ ಎಸ್ ಟಿ ಪ್ರಾಥಮಿಕ ಶಾಲೆಯ 08 ವಿದ್ಯಾರ್ಥಿಗಳು ಸೈನಿಕ ಶಾಲೆಗೆ ಆಯ್ಕೆ






ವಿಜಯಪುರ 15: ಮಾತೋಶ್ರೀ ಶಂಕ್ರೆಮ್ಮಾತಾಯಿ ಪ್ರಾಥಮಿಕ ಶಾಲೆ ಕತಕನಹಳ್ಳಿ ಶಾಲೆಯಲ್ಲಿ 2023-24 ನೇ ಶೈಕ್ಷಣಿಕ ವರ್ಷದಲ್ಲಿ 5 ನೇ ವರ್ಗದಲ್ಲಿ ಓದುತ್ತಿದ್ದ ಒಟ್ಟು 16 ವಿದ್ಯಾರ್ಥಿಗಳು ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷಗೆ ಕುಳಿತು, ಅದರಲ್ಲಿ 15 ವಿದ್ಯಾರ್ಥಿಗಳು ಅರ್ಹತೆ ಹೊಂದಿ, 2024-25 ನೇ ಶೈಕ್ಷಣಿಕ ವರ್ಷದ ದೇಶದ ವಿವಿಧ ಅಖಿಲ ಭಾರತ ಸೈನಿಕ ಶಾಲೆಗಳಿಗೆ ನಮ್ಮ ಶಾಲೆಯಿಂದ ಪ್ರಥಮ ಬಾರಿಗೆ ಒಟ್ಟು 08 ವಿದ್ಯಾರ್ಥಿಗಳು 6 ನೇ ವರ್ಗಕ್ಕೆ ಪ್ರವೇಶ ಪಡೆಯಲು ಆಯ್ಕೆಯಾಗಿರುತ್ತಾರೆ ಎಂದು ತಿಳಿಸಲು ಹರ್ಷವೆನಿಸುತ್ತದೆ.  

ವಿದ್ಯಾರ್ಥಿಗಳಾದ ಆದರ್ಶ ನಾಗೋಡ, (ಕುರ್ಡುವಾಡಿ ಸೈನಿಕ ಶಾಲೆ ಮಹಾರಾಷ್ಟ್ರ ) ಶಿವರಾಜ ಸೋಲಾಪೂರ (ಜೈಪೂರ ಸೈನಿಕ ಶಾಲೆ ರಾಜಸ್ಥಾನ), ಸೃಷ್ಠಿ ಬೀಳಗಿ (ಕುರ್ಡುವಾಡಿ ಸೈನಿಕ ಶಾಲೆ ಮಹಾರಾಷ್ಟ್ರ ) ಭರಮಣ್ಣ ಬನಗೊಂಡ (ಕುರುಕ್ಷೇತ್ರ ಸೈನಿಕ ಶಾಲೆ ಹರಿಯಾಣಾ) ಬಸಮ್ಮ ಬಿರಾದಾರ (ನಂದಗಾಂವ್ ಸೈನಿಕ ಶಾಲೆ ಛತ್ತಿಸಘಡ), ಸ್ಪಂದನಾ ಸೋಲಾಪೂರ (ಜೈಪೂರ ಸೈನಿಕ ಶಾಲೆ ರಾಜಸ್ಥಾನ), ರಾಜೇಶ್ವರಿ ಬಂಡಿ (ಮಾವೆಲಿಕ್ಕರ ಸೈನಿಕ ಶಾಲೆ ಕೆರಳ), ಹಾಗೂ ವೇದಾಂತ ಸಿಂದೆ (ಜೈಪೂರ ಸೈನಿಕ ಶಾಲೆ ರಾಜಸ್ಥಾನ) ಈ ದೇಶದ ವಿವಿಧ ಅಖಿಲ ಭಾರತ ಸೈನಿಕ ಶಾಲೆಗಳಿಗೆ ಆಯ್ಕೆಯಾಗಿಯಾಗಿದ್ದಾರೆ. 

ಅತ್ಯಂತ ಕಠಿಣ ಅಭ್ಯಾಸದದ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಹೆಚ್ಚು ಅಂಕಳನ್ನು ಪಡೆದು ದೇಶದ ಪ್ರತಿಷ್ಠಿತ ವಿವಿಧ ಅಖಿಲ ಭಾರತ ಸೈನಿಕ ಶಾಲೆಗಳಿಗೆ ಪ್ರವೇಶ ಪಡೆಯಲು ಆಯ್ಕೆಯಾದ ಈ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. 

ಈ ವಿದ್ಯಾರ್ಥಿಗಳಿಗೆ ಪರಮ ಪೂಜ್ಯ   ಶಿವಯ್ಯ ಮಹಾಸ್ವಾಮೀಜಿಯವರ ಆಶೀರ್ವಾದೊಂದಿಗೆ ಶ್ರೀಗುರು ಚಕ್ರವರ್ತಿ ಸದಾಶಿವ ವಿದ್ಯಾವರ್ಧಕ ಸಂಸ್ಥೆ ಕತಕನಹಳ್ಳಿಯ ಚೇರಮನ್ನರು   ಅಪ್ಪಾಸಾಹೇಬ ಪಟ್ಟಣಶೇಟ್ಟಿ ಹಾಗೂ ಸದಸ್ಯರು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು   ಬಸವರಾಜ ಎಸ್ ಕೌಲಗಿ ಹಾಗೂ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಕೋಚಿಂಗ್ ವಿಭಾಗದ ಮೇಲ್ವಿಚಾರಕರಾದ ಶ್ರೀ ಹೇಮಂತ ನಾಯಕ ಶಾಲೆಯ ಮುಖ್ಯಗುರುಗಳಾದ ಅರವಿಂದ ಬಿ ಪವಾರ ಸಿಬ್ಬಂದಿವರ್ಗ ಹಾಗೂ ಎಲ್ಲ ಪಾಲಕರು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.