ಭಾರತೀಯ ಅರೆ ಸೇನಾ ಪಡೆಯಲ್ಲಿ 21 ವರ್ಷ ಸೇವೆ ಸಲ್ಲಿಸಿದ ಯೋಧ ಮೈನಳ್ಳಿ ಮಹೇಶ್ವರ್ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ

ಬಿ.ಎಲ್.ಆರ್04 ಭಾರತೀಯ ಅರೆ ಸೇನಾ ಪಡೆ ಸಿ.ಆರ್.ಪಿ.ಎಫ್ನಲ್ಲಿ 21 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಸ್ವಯಂ ನಿವೃತ್ತಿ ಪ


ಬಳ್ಳಾರಿ.ಜು.05: ಭಾರತೀಯ ಅರೆ ಸೇನಾ ಪಡೆ ಸಿ.ಆರ್.ಪಿ.ಎಫ್ನಲ್ಲಿ 21 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಯೋಧ ಮಹೇಶ್ವರ್ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತವನ್ನು ಊರಿನ ಗ್ರಾಮಸ್ಥರು ಮಾಡಿದರು. ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಸೊನ್ನ ಗ್ರಾಮ ಯೋಧ ಮೈನಳ್ಳಿ ಮಹೇಶ್ವರ್, 1997ರಲ್ಲಿ ಭಾರತೀಯ ಅರೆ ಸೇನಾ ಪಡೆ ಸಿ.ಆರ್.ಪಿ.ಎಫ್ ನಲ್ಲಿ ಕಾನ್ಸ್ಟೇಬಲ್ ವೃತ್ತಿಗೆ ಆಯ್ಕೆಯಾಗಿ ಭಾರತ ದೇಶದ ವಿವಿಧ ರಾಜ್ಯಗಳಾದ ಕನರ್ಾಟಕ, ತಮಿಳುನಾಡು, ಆಂದ್ರಪ್ರದೇಶ, ಜಮ್ಮು-ಕಾಶ್ಮೀರ, ತ್ರಿಪುರ, ಮಧ್ಯಪ್ರದೇಶ, ಗುಜರಾತ್, ಕೇರಳ, ಛತ್ತೀಸ್ಗಡ, ಇನ್ನಿತರ ರಾಜ್ಯಗಳಲ್ಲಿ 21 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಜೂನ್ 30 ರಂದು ಛತ್ತೀಸ್ಗಡ ರಾಜ್ಯದ ಸಿ.ಆರ್.ಪಿ.ಎಫ್ 230 ಬೆಟಾಲಿಯನ್ ನಿಂದ ಸ್ವಯಂ ನಿವೃತ್ತಿಯನ್ನು ಪಡೆದು ತನ್ನ ಗ್ರಾಮವಾದ ಸೊನ್ನಕ್ಕೆ ಬಂದಾಗ ಊರಿನ ಗ್ರಾಮಸ್ಥರು ಅದ್ದೂರಿಯ ಸ್ವಾಗತವನ್ನು ಮಾಡಿದರು. ಊರಿನಿಂದ 2 ಕೀಲೋ ಮೀಟರ್ ದೂರದಲ್ಲಿರುವ ಶ್ರೀಕಟ್ಟೆ ಬಸವೇಶ್ವರ ದೇವಸ್ಥಾನ ಹತ್ತಿರ ಕಾಯುತ್ತಾ ನಿಂತು ನಿವೃತ್ತಿ ಯೋಧನಿಗೆ ಊರಿನ ಗ್ರಾಮಸ್ಥರಿಂದ 60 ಬೈಕ್ಗಳ ಮೂಲಕ ಬೈಕ್ ರ್ಯಾಲಿ ಮುಖಾಂತರ ವಿವಿಧ ಬೀದಿಗಳ ಮುಖಾಂತರ ಗ್ರಾಮದ ಸೊಲ್ಲಮ್ಮ ದೇವಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದೇವಿಗೆ ಪೂಜೆಯನ್ನು ಸಲ್ಲಿಸಿ ಅಲ್ಲಿಂದ ಟ್ಯಾಕ್ಟರ್ ನಲ್ಲಿ ಯೋಧ ಮಹೇಶ್ವರ್ ಅವರನ್ನು ಮೆರವಣಿಗೆಯೊಂದಿಗೆ ವಿವಿಧ ವಾದ್ಯವೃಂಧಗಳೊಂದಿಗೆ ಗ್ರಾಮದಲ್ಲಿ ದೇಶಭಕ್ತಿಗೀತೆಗಳೊಂದಿಗೆ ಮೆರವಣಿಗೆಯನ್ನು ಮಾಡಿದರು. ಈ ಸಮಯದಲ್ಲಿ ಮಲ್ಲಪ್ಪ, ನೀಲಪ್ಪ, ಹುಲಿಯಪ್ಪ, ಹನುಮಂತ, ಸಹೋದರ ಪೊಲೀಸ್ ಇಲಾಖೆ ಮೈನಳ್ಳಿ ಉಮೇಶ್ ಮತ್ತು ಊರಿನ ಗ್ರಾಮಸ್ಥರು ಇದ್ದರು.