ಬೆಳಗಾವಿ : ಎಸ್ಎಸ್ಎಲ್ಸಿ ಪರೀಕ್ಷೆಯ ಭಯದ ಹಿನ್ನೆಲೆಯಲ್ಲಿ ವಿದ್ಯಾಥರ್ಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ತಡರಾತ್ರಿ ನಗರದಲ್ಲಿ ನಡೆದಿದೆ.ಇಂದು ಪ್ರಾರಂಭವಾದ ಪರೀಕ್ಷೆಯನ್ನು ಬರೆಯಬೇಕಿದ್ದ ವಿದ್ಯಾಥರ್ಿನಿಯು ಶವವಾಗಿರುವದು ಮನೆಯವರ ದುಖಃ ಮಡುಗಟ್ಟುವಂತೆ ಮಾಡಿದೆ. ನಗರದ ವಡಗಾವಿಯ ಕಲಮೇಶ್ವರ ರಸ್ತೆಯ ನಿವಾಸಿಯಾಗಿರುವ ವಿದ್ಯಾಥರ್ಿನಿ ಸುಜಾತಾ ಸುಭಾಷ ಢಗೆ ಆತ್ಮಹತ್ಯೆ ಮಾಡಿಕೊಂಡಿರುವ ದುದರ್ೈವಿಯಾಗಿದ್ದಾಳೆ. ಇವಳು ಗರುವಾದಿಂದ ಪ್ರಾರಂಭವಾದ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಿದ್ದವಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇವಳು ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿ ವ್ಯಾಸಾಂಗ ಮಾಡುತ್ತಿದ್ದ ಈ ಬಾಲಕಿ ಪರೀಕ್ಷೆಯ ಭಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾಳೆ ಎನ್ನಲಾಗುತ್ತಿದೆ.ಬುಧವಾರ ರಾತ್ರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಪೋಷಕರೊಂದಿಗೆ ಮಾತನಾಡಿದ್ದ ಬಾಲಕಿ, ಪರೀಕ್ಷೆ ಬರೆಯಲು ನಿಕಾರಿಸಿದ್ದಳು ಎನ್ನಲಾಗಿದೆ. ಆದರೆ ನಿನಗೆ ಎಷ್ಟು ತಿಳಿಯುತ್ತದೆಯೋ ಅಷ್ಟೇ ಬರೆಯುವಂತೆ ಪಾಲಕರು ವಿದ್ಯಾಥರ್ಿನಿ ಸುಜಾತಾ ಈತಳಿಗೆ ಹೇಳಿದ್ದರು. ಆದರೆ ಬುಧವಾರ ತಡರಾತ್ರಿ ಸುಜಾತಾ ನೇಣಿಗೆ ಶರಣಾಗಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ. ಈ ಕುರಿತು ಶಾಹಾಪೂರ ಪೊಲೀಸ್ ಠಾಣೆ ದಾಖಲಾಗಿದೆ.