ಸೊಲ್ಲಾಪೂರ ಸಿದ್ದರಾಮೇಶ್ವರ ಜೀವನ ದರ್ಶನ ಆಧ್ಯಾತ್ಮಿಕ ಪ್ರವಚನ

ಉಗರಗೋಳ(ತಾ.ಸವದತ್ತಿ) 04: ತಾಯಿ ತಂದೆ ಕಲಿಸುವ ಸಂಸ್ಕಾರ, ಗುರುಗಳು ಕಲಿಸುವ ವಿದ್ಯೆ, ಸಮಾಜ ಕಲಿಸುವ ಬದುಕುವ ಕಲೆ, ನಾವು ಯಾವ ರೀತಿಯಾಗಿ ಸ್ವೀಕರಿಸುತ್ತೇವೆ ಎಂಬುವದರ ಮೇಲೆ ನಮ್ಮ ವ್ಯಕ್ತಿತ್ವ ರೂಪಗೊಳ್ಳುತ್ತದೆ ಎಂದು ಬಾಗಲಕೋಟೆಯ ಪರಮರಾಮಾರೂಢ ಮಹಾಸ್ವಾಮಿಗಳು ಹೇಳಿದರು.

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 5 ದಿನಗಳ ಪರ್ಯಂತ ಸೊಲ್ಲಾಪೂರದ ಸಿದ್ದರಾಮೇಶ್ವರ ಜೀವನ ದರ್ಶನ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಶರಣರ ಸಂಬಂಧಗಳು ನಾಲಿಗೆಗಿಂತ ಭಕ್ತರ ಹೃದಯವನ್ನು ಇಷ್ಟಪಡುತ್ತವೆ. ಉದ್ದೂದ್ದ ಮಾತುಗಳ ಬದಲಾಗಿ ಹೃದಯಕ್ಕೆ ಹತ್ತಿರವಾಗಬಲ್ಲ ಮೃದು ನಡುವಳಿಕೆ ನಮ್ಮದಾಗಲಿ ಎಂದರು.  

ದೊಡವಾಡದ ಜಡಿಸಿದ್ದೇಶ್ವರ ಮಹಾಸ್ವಾಮಿಗಳಿಂದ ಸಿದ್ದರಾಮೇಶ್ವರ ಜೀವನ ದರ್ಶನ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಜರುಗಿತು.

  ನಿವರ್ಾಣೇಶ್ವರಮಠದ ಗುರುಮಹಾಂತ ಪೂಜ್ಯರು ಹಾಗೂ ರಾಮಾರೂಢಮಠದ ಬ್ರಹ್ಮಾರೂಢ ಶ್ರೀಗಳು ಸಾನಿಧ್ಯವಹಿಸಿದ್ದರು. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಿದ್ದರಾಮೇಶ್ವರ ಜೀವನ ದರ್ಶನ ಆಧ್ಯಾತ್ಮಿಕ ಪ್ರವಚನ ಆಲಿಸಿದರು.