ಸ್ಮಾಟರ್್ ಫೋನ್ ಕೊಡದ ಗೆಳೆಯನನ್ನು ಕೊಂದು ಸುಟ್ಟ ತರುಣ


      ಹೈದರಾಬಾದ್ : ಹದಿನೇಳು ವರ್ಷ ಪ್ರಾಯದ ತನ್ನ ನೆರೆಮನೆಯ ಸ್ನೇಹಿತನನ್ನು ಆತ ಕೊಡಲು ನಿರಾಕರಿಸಿದ ಸ್ಮಾಟರ್್ ಫೋನಿಗಾಗಿ, 19 ವರ್ಷದ ತರುಣನೋರ್ವ ಆತನನ್ನು ಕೊಂದು ಬಳಿಕ ಮೃತದೇಹದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ. ಹೈದರಾಬಾದ್ ಪೊಲೀಸರು ಆರೋಪಿ ತರುಣನನ್ನು ಸೆರೆ ಹಿಡಿದಿದ್ದಾರೆ. ಬಂಧಿತ ಕೊಲೆಗಾರ ತರುಣನನ್ನು ಜಿ ಪ್ರೇಮ್ ಸಾಗರ್ ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹಿತನಾಗಿರುವ ನೆರೆಮನೆಯ ಡಿ ಪ್ರೇಮ್ ಎಂಬಾತನನ್ನು ಅದಿಬಾತ್ಲಾ ದ ನಿರ್ಜನ ಪ್ರದೇಶಕ್ಕೆ ಒಯ್ದು ಅಲ್ಲಿ ಆತನನ್ನು ದೊಣ್ಣೆಯಿಂದ ತಲೆಗೆ ಹೊಡೆದು ಕೊಂದು ಪೆಟ್ರೋಲ್ ಸುರಿದು ಸುಟ್ಟಿದ್ದಾನೆ ಎಂದು ಎಸಿಪಿ ಮಲ್ಕಾಗಿರಿ ತಿಳಿಸಿದ್ದಾರೆ. ಪ್ರೇಮ್ ನ ಮನೆಯವರು ಕಳೆದ ಜುಲೈ 14ರಂದು ಆತ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಶಂಕಿತ ಸಾಗರ್ನನ್ನು ಹಿಡಿದು ಪ್ರಶ್ನಿಸಿದಾಗ ಆತ ತಾನು ಪ್ರೇಮ್ ನನ್ನು ಆತ ತನಗೆ ಕೊಡಲು ನಿರಕಾರಿಸಿದ್ದ ಆತನ ಸ್ಮಾಟರ್್ ಫೋನಿಗಾಗಿ ಕೊಂದು ಸುಟ್ಟಿದ್ದು ಹೌದೆಂದು ಒಪ್ಪಿಕೊಂಡ.  

ಐದು ಬಾಲಕರಿಂದ 8ರ ಬಾಲೆಯ ಮೇಲೆ ರೇಪ್

ಡೆಹರಾಡೂನ್ : ಇಲ್ಲಿನ ಸಹಾಸ್ಪುರದಲ್ಲಿ ಎಂಟು ವರ್ಷ ಪ್ರಾಯದ ಬಾಲಕಿಯ ಹೆತ್ತವರು ಮನೆಯಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ ನರೆಕರೆಯ ಐವರು ಹುಡುಗರು ಆಕೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ. 

ಅತ್ಯಾಚಾರ ನಡೆಸಿರುವ ಹುಡುಗರೆಲ್ಲ 9ರಿಂದ 14 ವರ್ಷ ಪ್ರಾಯದವರಾಗಿದ್ದಾರೆ. ಅತ್ಯಾಚಾರಕ್ಕೆ ಎರಡು ದಿನ ಮೊದಲು ತಾವು ಮೊಬೈಲ್ನಲ್ಲಿ ಸೆಕ್ಸ್ ವಿಡಿಯೋ ನೋಡಿದ್ದಾಗಿ ಹುಡುಗರು ಪೊಲೀಸರಲ್ಲಿ ಹೇಳಿದ್ದಾರೆ. ಬಾಲಕಿಯ ಮೇಲಿನ ಅತ್ಯಾಚಾರದ ಈ ಘಟನೆ ಜು.12ರಂದು ನಡೆದಿದ್ದು  ಬಾಲಕಿಯ ಹೆತ್ತವರು ಕಳೆದ ಶನಿವಾರ ಪೊಲೀಸರಿಗೆ ದೂರು ನೀಡಿದಾಗಲೇ ವಿಷಯ ಬೆಳಕಿಗೆ ಬಂತು. ಆರೋಪಿ ಬಾಲಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿ ಅವರನ್ನು ಬಾಲಪರಾಧಿ ಗೃಹಕ್ಕೆ ಕಳುಹಿಸಲಾಗಿದೆ ಎಂದು ಬಾಲಾಪರಾಧ ನ್ಯಾಯ ಮಂಡಳಿಯ ಚೀಫ್ ಮ್ಯಾಜಿಸ್ಟ್ರೇಟ್ ಭಾವದೀಪ್ ರಾವತ್ ತಿಳಿಸಿದ್ದಾರೆ.