ಗ್ರಾಮೀಣ ಪ್ರದೇಶದ ದುಡಿಯುವ ಕೈಗಳಿಗೆ ಕೆಲಸ ಒದಗಿಸಿ; ಕರೀಂ ಅಸದಿ
ಕಾರವಾರ 21: ಜಿಲ್ಲಾ ಪಂಚಾಯತ್ನಿಂದ 2024-25ನೇ ಸಾಲಿಗೆ ಅನುಮೋದಿಸಲಾದ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಿ ಗ್ರಾಮೀಣ ಪ್ರದೇಶದ ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರು(ಡಿಆರ್ಡಿಎ) ಕರೀಂ ಅಸದಿ ಹೇಳಿದರು.
ಅವರು ಶನಿವಾರ ಮುಂಡಗೋಡ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಜರುಗಿದ ಮಹಾತ್ಮ ಗಾಂಧಿ ನರೇಗಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾತ್ಮ ಗಾಂಧಿ ನರೇಗಾದಡಿ ನಿಗದಿಪಡಿಸಿದ ಮಾನವ ದಿನಗಳ ಸೃಜನೆಯ ವಾರ್ಷಿಕ ಗುರಿ ಸಾಧನೆಗಾಗಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳು, ಕೃಷಿ, ಅರಣ್ಯ, ತೋಟಗಾರಿಕೆ ಸೇರಿದಂತೆ ಎಲ್ಲ ಅನುಷ್ಠಾನ ಇಲಾಖೆಗಳು ಅಗತ್ಯವಿರುವ ಪೂರ್ವ ಸಿದ್ಧತಾ ಕಾರ್ಯ ಯೋಜನೆ ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ತಾಲ್ಲೂಕಿನಾಧ್ಯಂತ ನರೇಗಾ ಹಾಗೂ ಶಿಕ್ಷಣ ಇಲಾಖೆಯ ಒಗ್ಗೂಡಿಸುವಿಕೆಯಡಿ ಕೈಗೊಳ್ಳುವ ಶಾಲಾ ಅಭಿವೃದ್ಧಿ ಹಾಗೂ ಅಂಗನವಾಡಿ ಕಾಮಗಾರಿಗಳನ್ನು ಪ್ರಾರಂಭಿಸಿ ಮೊದಲಿಗೇ ನರೇಗಾ ಅನುದಾನದ ಭಾಗವನ್ನು ಪೂರ್ಣಗೊಳಿಸಬೇಕು. ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳು ಸೇರಿದಂತೆ ವಾರ್ಷಿಕವಾಗಿ ಒಟ್ಟು 2,60,000 ಮಾನವ ದಿನಗಳ ಸೃಜನೆಯ ಗುರಿ ನಿಗದಿಪಡಿಸಿದ್ದು, ಈವರೆಗೆ ನಿಗದಿತ ಗುರಿ ಪೈಕಿ 1,90,877 ಮಾನವ ದಿನಗಳ ಸೃಜನೆ ಮಾಡುವ ಮೂಲಕ ಶೇ. 73.41 ರಷ್ಟು ಪ್ರಗತಿ ಸಾಧಿಸಲಾಗಿದೆ. ಆದರೂ ಸಹ ಇನ್ನೂ 69,123 ಮಾನವ ದಿನಗಳನ್ನ ಸೃಜಿಸುವುದು ಬಾಕಿಯಿದ್ದು, ಆರ್ಥಿಕ ವರ್ಷ ಮುಕ್ತಾಯಕ್ಕೆ ಉಳಿದಿರುವ ಮುಂದಿನ 3 ತಿಂಗಳಲ್ಲಿ ಬಾಕಿ ಮಾನವ ದಿನಗಳನ್ನ ಸೃಜಿಸುವ ಮೂಲಕ ಶೇ. 100ರಷ್ಟು ಪ್ರಗತಿ ಸಾಧನೆಗೆ ಗ್ರಾಮ ಪಂಚಾಯತಿಗಳು, ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ನರೇಗಾದಡಿ ಕಾರ್ಯನಿರ್ವಹಿಸುವ ಸಿಬ್ಬಂದಿ ಪರಸ್ಪರ ಒಗ್ಗೂಡಿಕೊಂಡು ಶ್ರಮಿಸಬೇಕಿದೆ. ಜೊತೆಗೆ 2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆಗಾಗಿ ಆನ್ಲೈನ್ನ ಪಿಡಿಒ ಲಾಗಿನ್ನಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ಹಾಗೂ ವೈಯಕ್ತಿಕ ಕಾಮಗಾರಿ ಸೇರೆ್ಡ ಮಾಡಿಸಬೇಕು. ಆನ್ಲೈನ್ನ ಕ್ರಿಯಾ ಯೋಜನೆಯಲ್ಲಿ ಸೇರಿಸಲಾದ ಕಾಮಗಾರಿಗಳ ಫ್ರೀಮೇಜರ್ಮೆಂಟ್ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ, ತಾಂತ್ರಿಕ ಸಂಯೋಜಕರು, ಸಹಾಯಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ. ದಾಸನಕೊಪ್ಪ, ನರೇಗಾ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ, ಪಿಆರಿ್ಡ ಎಇಇ ಪ್ರದೀಪ್ ಭಟ್ಟ, ಆರ್ಡಬ್ಲ್ಯುಎಸ್ನ ಎಇಇ ರಾಜೇಶ್ವರಿ ಕದಂ, ತಾಲೂಕು ಮಟ್ಟದ ವಿವಿದ ಇಲಾಖೆಯ ಅಧಿಕಾರಿಗಳು ಮತ್ತಿತರು ಇದ್ದರು.