ಮುಂಡರಗಿ 29: ಪಟ್ಟಣದಲ್ಲಿ ಇಂದು ಡೆಂಗ್ಯೂ, ಚಿಕುಂಗುನ್ಯ ರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೃಹತ್ ಲಾರ್ವಸರ್ವೆ ಸಮೀಕ್ಷೆಯನ್ನು ಮಾಡಲಾಗಿತ್ತು.
ಈ ಸಮೀಕ್ಷೆಗೆ ಚಾಲನೆಯನ್ನು ಡಾ. ಬಸವರಾಜ ಕೆ ತಾಲೂಕಾ ಆರೋಗ್ಯಾಧಿಕಾರಿಗಳು, ಮುಂಡರಗಿ ಇವರು ಮಾತನಾಡಿ ಡೆಂಗ್ಯೂ, ಚಿಕುಂಗುನ್ಯ ರೋಗವು ಈಡಿಸ್ ಇಜಿಪ್ಟೆ ಸೊಳ್ಳೆಯು ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಈ ಸೊಳ್ಳೆಯು ಸ್ವಚ್ಛವಾದ ನೀರಿನಲ್ಲಿ ಮೊಟ್ಟೆಗಳನ್ನಿಟ್ಟು, ತನ್ನ ವಂಶಾಭಿವೃದ್ಧಿಯನ್ನು ಮಾಡುತ್ತವೆ ಈ ರೋಗದ ಲಕ್ಷಣವು ವಿತರೀತ ಜ್ವರ ಮೈ-ಕೈ ನೋವು, ತೆಲೆ ನೋವು ಹಾಗೂ ಕಣ್ಣುಗಳು ಕೆಂಪಾಗುವುಕೆ ಇರುವವು ಅದಕ್ಕಗಿ ಈ ರೋಗವು ಹರಡದಂತೆ ಮುನ್ಯಚರಿಕೆವಾಗಿ ಮನೆಯಲ್ಲಿ ಶೇಖರಿಸುವ ನೀರಿನ ಪಾತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಛವಾಗಿ ತೊಳೆದು ನೀರನ್ನು ಶೇಖರಿಸಿ ಮೇಲೆ ಮುಚ್ಚಬೇಕು ಮತ್ತು ಮನೆಯ ಸುತ್ತ-ಮುತ್ತ ಪರಿಸರವನ್ನು ಸ್ಚಚ್ಛವಾಗಿಟ್ಟುಕೊಳ್ಳಬೇಕು. ಸೋಳ್ಳೆ ಬತ್ತಿ, ಬೇವಿನ ಸೊಪ್ಪನ ಹೊಗೆ, ಸೊಳ್ಳೆ ಪರದೆಯನ್ನು ಉಪಯೋಗ ಎಂದು ಹೇಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಒಟ್ಟು 62 ಟೀಮ್ 10 ಜನ ಮೇಲ್ವಿಚಾರಕರು ಮಾಡಿ 4020 ಮನೆಗಳನ್ನು ಸವರ್ೆ ಮಾಡಲಾಗಿದೆ ಎಂದು ಶ್ರೀಮತಿ ಎಮ್ ಎನ್ ಸಜ್ಜನರ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಮುಂಡರಗಿ, ಇವರು ಹೇಳಿದರು. ಹಿರಿಯ ಪುರುಷ ಆರೋಗ್ಯ ಸಹಾಯಕರಾದಂತಹ ಎಮ್ ಎಫ್ ಕಲಕಂಬಿ, ಕೆ.ಪಿ ಗಂಬೀರ, ಮಾಹದೇವಪ್ಪ ಹುರಳಿಕೊಪ್ಪಿ, ಅಜಯ ಕಲಾಲ, ಕದಾಂಪೂರ, ಎಸ್ ಎಸ್ ಹುಲಗೇರಿ, ಕೆ.ಎಸ್ ಚೌಟಗಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರೂ ಹಾಗೂ ಆಶಾ ಕಾರ್ಯಕತರ್ೆಯರು ಹಾಜರಿದ್ದರು.