ಲೋಕದರ್ಶನ ವರದಿ
ಮುದ್ದೇಬಿಹಾಳ 16: ಕಾಪರ್ೋರೇಟರ್ ಕಂಪನಿಗಳ ಪರವಾಗಿ ಕಾರ್ಮಿ ಕರ ಕಾನೂನುಗಳನ್ನು ತಿದ್ದುಪಡೆ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾಮರ್ಿಕರ ಮೇಲೆ ಶೋಷಣೆ ಮಾಡುತ್ತಿದ್ದು ಕೂಡಲೆ ಇದನ್ನು ನಿಲ್ಲಿಸಬೇಕು ಎಂದು ಸಂಘಟನೆಯ ನೌಕರರ ಸಂಘದ ಅಧ್ಯಕ್ಷ ಅಬ್ದುಲ್ರಜಾಕ ತಮದಡ್ಡಿ ಹೇಳಿದರು.
ಇಲ್ಲಿನ ರಾಘವೇಂದ್ರ ಮಂಗಲ ಕಾಯರ್ಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ತಾಲೂಕಾ ಮಟ್ಟದ ಸಿಐಟಿಯು 2ನೇ ತಾಲೂಕಾ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಾಮರ್ಿಕರ ಮೇಲ ಆಗುತ್ತಿರುವ ಶೋಷಣೆಗಳನ್ನು ಸರಕಾರಗಳು ನಿಲ್ಲಿಸದಿದ್ದರೆ ನಮ್ಮ ಸಂಘಟನೆಗೆ ಹೋರಾಟಕ್ಕೆ ದಾರಿ ನೀಡಿದಂತಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಕ್ಷರ ದಾಹಸ ನೌಕರರ ಸಂಘದ ತಾಲೂಕಾ ಅಧ್ಯಕ್ಷೆ ಸುವರ್ಣ ರಾಠೋಡ, ರಾಜು ಬನ್ನಟ್ಟಿ, ಆರತಿ ಜಾನಕರ್, ಶಿವಾನಂದ ನಾಯಕಮಕ್ಕಳ, ನಾಗಪ್ಪ ಹರಿಜನ, ಶಿವಸಂಗಪ್ಪ ಬಿರಾದಾರ, ಲಕ್ಷ್ಮೀ ಲಮಾಣಿ, ಗಿರಿಜಾ ಅಂಗಡಿ, ರೇಣುಕಾ ಚೌಧರಿ, ಪದ್ಮಾವತಿ ದೇವಗೀರಕರ್, ಮೈಮದಾಬೇಗಂ ಜಮಾದಾರ, ನಾಗಪ್ಪ ಚವನಭಾವಿ ಸೇರಿದಂತೆ ಇತರರಿದ್ದರು.