ಲೋಕದರ್ಶನ ವರದಿ
ಕಂಪ್ಲಿ 03: ಅಂಬೇಡ್ಕರ್ವರ ಶಿಕ್ಷಣ. ಸಂಘಟನೆ. ಹೋರಾಟ ಈ ಮೂರು ಸೂತ್ರಗಳನ್ನು ಯವಕರು ಮತ್ತು ದಲಿತ ಸಂಘಟನೆಗಳು ಅಳವಡಿಸಿಕೊಂಡಾಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಸುವಲ್ಲಿ ದಲಿತ ಸಂಘಟನೆಗಳು ಮುಂದಾಗ ಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಹಾಗೂ ಹಾನಗಲ್ ಜಿಪಂ ಸದಸ್ಯ ಮುಂಡರಗಿ ನಾಗರಾಜ ಹೇಳಿದರು.
ಅವರು ಬುಧವಾರ ತಾಲೂಕಿನ ಹೊಸನೆಲ್ಲೂಡಿ ಗ್ರಾಮದ ಕೆಂಚಮ್ಮ ದೇವಸ್ಥಾನ ಬಳಿಯಲ್ಲಿ, ಕರ್ನಾಟಕದ ದಲಿತ ಸಂಘರ್ಷ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಸಮಿತಿಯ ಹೊಸ ನೆಲ್ಲೂಡಿ ಗ್ರಾಮ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ. ಸಮಾಜದಲ್ಲಿ ಶಿಕ್ಷಣಕ್ಕೆ ಉನ್ನತ ಸ್ಥಾನ ಇದೆ ತಾಯಂದಿರು ಮಕ್ಕಳಿಗೆ ತಪ್ಪದೆ ಶಾಲೆಗೆ ಕಳುಹಿಸಿ. ಸರ್ಕಾರದ ಉಧೋಗ ಪಡೆಯ ಬಹುದು ಕೇವಲ ಶೇ.18ರಷ್ಟು ಮೀಸಲಾತಿ ನೀಡಿದ್ದು ಉಳಿದ ಶೇ.4.5ರಷ್ಟು ಮೀಸಲಾತಿ ನೀಡುವ ಅಗತ್ಯವಿದೆ. ಗಂಡಸರನ್ನು ಧೂಮಪಾನದಿಂದ ದೂರವಿದ್ದಾಗ ಮಾತ್ರ.ಸಮಾಜದಲ್ಲಿ ಸ್ಥಾನಗಳು ಸಿಗುತ್ತವೆ. ದಲಿತ ಯುವಕರು ಶಿಕ್ಷಣದೊಂದಿಗೆ ಸಂಘಟನಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕನರ್ಾಟಕ ದಲಿತ ಸಂಘರ್ಷ ಸಮಿತಿಯ ಕಂಪ್ಲಿ ತಾಲೂಕು ಸಂಚಾಲಕ ಲಕ್ಷ್ಮಿಪತಿ ಅಧ್ಯಕ್ಷತೆವಹಿಸಿ, ಮಾತನಾಡಿಸಮಾಜದ ಎಲ್ಲಾ ವರ್ಗದವರಿಗೆ ಸಕರ್ಾರದ ಯೋಜನೆಗಳನ್ನು ತಲುಪಿಸುವಲ್ಲಿ ದಲಿತ ಸಂಘಟನೆಗಳು ಮುಂದಾಗಬೇಕು ಎಂದರು.
ಜಿಲ್ಲಾ ಸಂಚಾಲಕ ಜಿ.ಗೋವರ್ಧನ ಹೊಸನೆಲ್ಲೂಡಿ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರುಜಿಲ್ಲೆಯ ಜೆಡಿಎಸ್ ಮುಖಂಡ ಎಚ್.ವಿಜಯಕುಮಾರ್ ಜಿಲ್ಲಾ ದಲಿತ ಕಲಾಮಂಡಳಿ ಅಧ್ಯಕ್ಷ ದೇವಪ್ರಿಯ, ಹೊಸನೆಲ್ಲೂಡಿ ಗ್ರಾಮದ ಮುಖಂಡ ಪಿ.ಕೊಂಡಯ್ಯ, ಜಿಲ್ಲಾ ಸಂಘಟನಾ ಸಂಚಾಲಕರಾದ ವೀರಭದ್ರಪ್ಪ, ನಟರಾಜ, ಪೋಟೋ ರಾಜು, ಸಣ್ಣ ನಾಗರಾಜ, ಹೊಸಪೇಟೆ ತಾಲೂಕು ಸಂಚಾಲಕ ಎಚ್.ಗುಂಡಪ್ಪ, ಸಿ.ಕೃಷ್ಣ, ಮಾದಿಗ ದಂಡೋರ ಅಧ್ಯಕ್ಷ ಎ.ಲಕ್ಷ್ಮಿನಾರಾಯಣ, ಗ್ರಾಪಂ ಉಪಾಧ್ಯಕ್ಷ ಎಂ.ಮಲ್ಲಿಕಾಜರ್ುನ, ಕಾರ್ಯದರ್ಶಿ ಬಸವರಾಜಸ್ವಾಮಿ, ಡಿಎಸ್ಎಸ್ ಕಾರ್ಯಕರ್ತ ಶಂಭುಲಿಂಗ, ದಸಂಸ ಹೊಸನೆಲ್ಲೂಡಿ ಗ್ರಾಮ ಶಾಖೆಯ ಸಂಚಾಲಕ ಕಜ್ಜಿ ಮಹೇಶ್, ಎಚ್.ಹುಲುಗಪ್ಪ ಸೇರಿ ನೂತನ ಪದಾಧಿಕಾರಿಗಳು, ಗ್ರಾಮಸ್ಥರು, ನಾನಾ ದಲಿತ ಸಂಘಟನೆಗಳವರು ಪಾಲ್ಗೊಂಡಿದ್ದರು. ಹೊಸನೆಲ್ಲೂಡಿ ಸಕರ್ಾರಿ ಪ್ರೌಢಶಾಲೆಯ ಅಶ್ವಿನಿ ತಂಡದವರು ನಾಡಗೀತೆ ಹಾಡಿದರು. ಸಂಚಾಲಕ ಎಚ್.ಗುಂಡಪ್ಪ ಸ್ವಾಗತಿಸಿ, ನಿರೂಪಿಸಿದರು.