ವಿಶ್ವವಿದ್ಯಾಲಯಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ

ಲೋಕ ದರ್ಶನ ವರದಿ 

ಧಾರವಾಡ  09 : ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಎಲ್ಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಕನರ್ಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಅಪರ ಪ್ರಧಾನ ಮುಖ್ಯಕಾರ್ಯದಶರ್ಿಗಳಾದ ಬಿ.ಎಚ್.ಅನಿಲಕುಮಾರ ಹೇಳಿದರು.

      ನಗರದ ಕನರ್ಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗದಲ್ಲಿ ಕವಿವಿಯ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಸ್ನಾತಕೋತ್ತರ ಶಿಕ್ಷಕರ ಸಂಘ ಹಾಗೂ ಕನರ್ಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ ಅಭಿನಂಧನಾ ಸಮಾರಭದಲ್ಲಿ ಮಾತನಾಡಿದರು.

     ಪ್ರಸ್ತುತ ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಮತ್ತು ಬ್ಯಾಂಕ್, ಖಾಸಗಿ ಕ್ಷೇತ್ರಗಳಲ್ಲಿ ಕನ್ನಡಿಗರ ಸಂಖ್ಯೆ ಕೇವಲ ಒಂದು ರಷ್ಟು ಮಾತ್ರವಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ವಿದ್ಯಾಥರ್ಿಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಕಾಲೇಜುಗಳಲ್ಲಿ ವಿದ್ಯಾಥರ್ಿಗಳಲ್ಲಿ ಸಂವಹನ ಕೌಶಲ್ಯ ಹೆಚ್ಚಿಸುವದಕ್ಕಾಗಿ ಮತ್ತು ಅವರನ್ನು ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವಲ್ಲಿ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದರು.

       ಡಾ. ಅಂಬೇಡ್ಕರ ಅಧ್ಯಯನ ವಿಭಾಗದ ಸಂಯೋಜಕರಾದ ಪ್ರೊ. ಸುಭಾಶ್ಚಂದ್ರ ನಾಟೀಕರ ಮಾತನಾಡಿ ಕನರ್ಾಟಕ ವಿಶ್ವವಿದ್ಯಾಲಯದಲ್ಲಿ ಬ್ಯಾಕ್ಲಾಗ್ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ನೇಮಕಾತಿ ಮಾಡುವಲ್ಲಿ ಕ್ರಮಕೈಗೋಳ್ಳಬೇಕು ಎಂದು ಮನವಿ ಮಾಡಿದರು.

        ಕನರ್ಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪ್ರಮೋದ ಗಾಯಿ ಮಾತನಾಡಿ ವಿದ್ಯಾಥರ್ಿಗಳ ಭವಿಷ್ಯದ ಹಿತದೃಷ್ಟಿಯಿಂದ ಕನರ್ಾಟಕ ವಿಶ್ವವಿದ್ಯಾಲಯವು 13 ದೂಡ್ಡ ಮಟ್ಟದ ಅನೇಕ ಉದ್ಯಮ ಮತ್ತು ಸಂಶೋಧನಾ ಸಂಸ್ಥೆಗಳ ಜೊತೆ  ವಿನಿಮಯ ಒಪ್ಪಂದ ಮಾಡಿಕೊಂಡಿದ್ದು, ಈಗಾಗಲೇ ವಿಶ್ವವಿದ್ಯಾಲಯದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು 'ಈಕ್ವಲ್ ಅಪಾಚರ್ುನಿಟಿ ಸೆಲ್ ಮೂಲಕ ವಿದ್ಯಾಥರ್ಿಗಳಿಗೆ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕವಿವಿಯ ಅಂಬೇಡ್ಕರ ಅಧ್ಯಯನದ ಡಾ.ಸುಭಾಶ್ಚಂದ್ರ ನಾಟೀಕರ್, ಕವಿವಿಯ ಕುಲಸಚಿವರಾದ ಪ್ರೊ. ಸಿ.ಬಿ.ಹೊನ್ನು ಸಿದ್ದಾರ್ಥ, ಮೌಲ್ಯಮಾಪನ ಕುಲಸಚಿವರಾದ ಡಾ. ಎಮ್.ಎನ್.ಸಾಲಿ, ಕನರ್ಾಟಕ ವಿಶ್ವವಿದ್ಯಾಲಯದ ಶಿಕ್ಷಕ ಸಂಘದ ಅಧ್ಯಕ್ಷರಾದ ಡಾ. ಎಸ್.ಟಿ ಬಾಗಲಕೋಟೆ, ಡಾ. ಶಿವರುದ್ರ ಕಲ್ಲೋಳಕರ, ಡಾ. ನಿಜಲಿಂಗಪ್ಪ ಮಟ್ಟಿಹಾಳ, ಪ್ರೊ. ಆರ್ ಎಲ್ ಹೈದ್ರಾಬಾದ  ಡಾ. ಸಿ.ಎಫ್.ಮೂಲಿಮನಿ, ಡಾ. ಮಲ್ಲಿಕಾಜರ್ುನ ತರ್ಲಗಟ್ಟಿ ಸೇರಿದಂತೆ ಕವಿವಿಯ ಶಿಕ್ಷಕ ಮತ್ತು ಶಿಕ್ಷಕೇತರ ಸಂಘದ ಸದಸ್ಯರು ಸಂಶೋಧನಾ ವಿದ್ಯಾಥರ್ಿಗಳು ಹಾಜರಿದ್ದರು.