ವಾಷರ್ಿಕ ಬೀರೇಶ್ವರ ಜಾತ್ರಾಮಹೋತ್ಸವ

ಧಾರವಾಡ08:  ಹಾಲುಮತ ಬೀರೇಶ್ವರ ಪರಂಪರೆ ಹೊಂದಿದ ಒಂದು ಪುರಾತನ ಇತಿಹಾಸವಾಗಿದೆ ಜನಪದರು ಡೊಳ್ಳಿನ ಹಾಡಿಕೆ ಅನೇಕ ಐತಿಹ್ಯಗಳಿಂದ ಬೀರೇಶ್ವರ ಚರ್ರಿತೆ ರೋಚಕ ಹಾಗೂ ಸೊಗಸಾಗಿ ಭಕ್ತಿ ಪರಂಪರೆ ಬೆಳೆಸಿದೆ ಬುದ್ಧ ಬಸವ ಕನಕ-ಕಾಳಿದಾಸ ಗೊಲ್ಲಾಳೇಶ್ವರ ಕಾಡು ಕುರುಬರ ದೈವ ವೀರಭದ್ರೇಶ್ವರ ಹಂಪೆಯ ವೀರುಪಾಕ್ಷ ನೇಪಾಳದ ಪಶುಪತಿ ಅಲ್ಲಿಯ ರಾಜ ಪರಂಪರೆ ಬೀರೇಶ್ವರನ ನಿಜ ನೆಲೆಗಳಾಗಿವೆ ಎಂದು ಮನಸೂರ ರೇವಣಸಿದ್ದೇಶ್ವರ ಮಹಾಮಠದ ಪೀಠಾಧಿಪತಿ ಪೂಜ್ಯಶ್ರೀ ಬಸವರಾಜದೇವರು ಇಂದಿಲ್ಲಿ ನುಡಿದರು. 

ಅವರು ಬೋಗೂರ ಗ್ರಾಮದಲ್ಲಿಂದು ವಾಷರ್ಿಕ ಬೀರೇಶ್ವರ ಜಾತ್ರಾಮಹೋತ್ಸವ -2019 ನಿಮಿತ್ಯ ನೂತನ ಗೋಪುರ ಹಾಗೂ ಕಳಸಾರೋಹಣ ಲೋಕರ್ಪಣೆ ಮಾಡಿ ಮಾತನಾಡಿದ ಶ್ರೀಗಳು ಸುಂದರವಾದ ಅತ್ಯಂತ ಶಿಲ್ಪಕಲೆ ಹೊಂದಿದ ಗೋಪುರ ಬಹು ವಿಶಿಷ್ಠ ಹೊಂದಿದೆ ಈ ಜಾತ್ರೆ ಈ ಭಾಗದ  ಬೀರೇಶ್ವರ ಭಕ್ತ ಸಮೂಹಕ್ಕೆ ಆರಾಧನೆ ಕೇಂದ್ರವಾಗಿದೆ ಎಂದು ಎಂದು ಶ್ರೀಗಳು ನುಡಿದರು. 

ವೇದಮೂತರ್ಿ ಮುದಕಯ್ಯ ಹಿರೇಮಠರವರಿಂದ ಬೀರೇಶ್ವರನಿಗೆ ರುದ್ರಭಿಷೇಕ ಸಹಸ್ರ ಬಿಲ್ವಾರ್ಚನೆ ಮಹಾಮಂಗಲ ಪ್ರಸಾದ ವಿತರಣೆ ಜರುಗಿತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳಿನ ಕಲಾ ತಂಡಗಳಿಂದ ಪಾಲಿಕೆ ಉತ್ಸವ ನಡೆಯಿತು ಸಾಮೂಹಿಕ ವಿವಾಹಗಳು ನಡೆದವು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.