ಹೂವಿನಹಡಗಲಿ: ಶ್ರೀಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ ಜಾತ್ರೆಗೆ ತೆರೆ

ಲೋಕದರ್ಶನ ವರದಿ

ಹೂವಿನಹಡಗಲಿ 14: ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾಣರ್ಿಕೋತ್ಸವ ನಂತರ  ಗಂಗಮಾಳಮ್ಮನ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ 3 ಗಂಟೆಗೆ ಪ್ರಸ್ತುತಪಡಿಸಿದ ಗೊರವರು,ಕಂಚಿವೀರರ ನಡೆಸುವ ಭಗಣಿಗೂಟ, ಸರಪಳ್ಳಿ ಪವಾಡ ನೆರೆದಿದ್ದ ಭಕ್ತರನ್ನು ಬೆಚ್ಚಿ ಬೀಳಿಸುವಂತಾಗಿತ್ತು.

ಈ ಹಿಂದೆ ಡೆಂಕಣ ಮರಡಿಯಲ್ಲಿ ರಾಕ್ಷಸರು ಜನ್ಮತಾಳಲು ಆಗಲಿಲ್ಲ ಎಂದು ನಂಬಿಕೆ ಭಕ್ತರದ್ದು ಆಗಿತ್ತು. ಈ ಸಂಹಾರದ ನೆನಪಿಗಾಗಿ ಶಿರಚ್ಛೇದ ನಡೆಯುತ್ತಿತ್ತು.ಅಹಿಂಸೋ ಪರಂಮೋ ಧರ್ಮ ಬಂದ ನಂತರ ನಿಲ್ಲಿಸಿ ಇದೀಗ ಆದಿ ಕನರ್ಾಟಕ ಜನಾಂಗದ ಕಂಚಿವೀರರು ಭಗಣಿ ಗೂಟ ಪವಾಡವನ್ನು ಜನರ ಆಕರ್ಷಣೆ ಮಾಡುತ್ತಿದೆ.

ದೇಗುಲ ಬಳಿ ಮೊದಲು ಭಗಣಿಗೂಟುಗಳು, ಚರ್ಮದ ಮಿಣಿಗಳು, ಮುಳ್ಳುಗಳು, ಖಡ್ಗಗಳು, ಸರಪಳಿಗಳು ಸೇರಿದಂತೆ ಅನೇಕ ಆಯುಧಗಳ ಪೂಜೆ ನಂತರ ಧರ್ಮಕರ್ತ ವೆಂಕಪ್ಪಯ್ಯ ಒಡೆಯರು ಭಂಡಾರ ಆಶೀರ್ವಾದ ಎಲ್ಲರು ಪಡೆಯುವ ಮೂಲಕ ಕಂಚಿ ವೀರರು (ಪಂಚವೀರರು) ಒಟ್ಟು 5ವೇಷ ಧರಿಸಿ ಪವಾಡಗಳನ್ನು ಪ್ರದರ್ಶನ ಮಾಡಿದರು.

ಕಾಲಿಗೆ ಭಗಣಿಗೂಟ ಬಡಿದುಕೊಳ್ಳುವುದು, ಕಾಲಿಗೆ ರಂಧ್ರ ಕೊರೆದು ಅದರಲ್ಲಿ ಮುಳ್ಳುಗಳನ್ನು ದಾಟಿಸುವುದು, ಮುಂಗೈಗೆ ಕಬ್ಬಿಣ ಆರತಿ ಚುಚ್ಚಿ ಕೋಡು ದೀಪ ಹಚ್ಚುವುದು.ಗ್ವಾರಪ್ಪರ ಕಬ್ಬಿಣದ ಸರಪಳಿ ಹರಿಯುವುದು ಸೇರಿದಂತೆ ಅನೇಕ ಪವಾಡಗಳು ನೆರೆದಿದ್ದ ಭಕ್ತರನ್ನು ಬೆರಗುಗೊಳಿಸಿತು. ಕಂಚಿವೀರರು ಮೈಲಾರಲಿಂಗ ದೇವರ ಕುರಿತು ಕೈಯಲ್ಲಿ ಖಡ್ಗ ಹಿಡಿದುಕೊಂಡು ಮಹಿಮೆಯನ್ನು ಹೊಗಳುವ ಒಡಪುಗಳನ್ನು ಹೇಳಿದರು. ಗೊರವರು ಸರಪಳಿ ಕಿತ್ತು ಹಾಕುವಾಗ ನೆರೆದಿದ್ದ ಭಕ್ತರು ಮತ್ತು ಗೊರವರ ಢಮರುಗದ ಶಬ್ದ ಪವಾಡ ಮಾಡುವವರಿಗೆ ಹಮ್ಮುಸ್ಸು ತಂದಿತು. ಸಿನಿಮಾ ಟಿ.ವಿ.ಸಂಸ್ಕೃತಿಯ ಇಂತಹ ಆಧುನಿಕ ಯುಗದಲ್ಲಿ ಇಂತಹ ಪವಾಡಗಳು ಜೀವಂತವಾಗಿವೆ. ಜಾನಪದ ಸೊಗಡನ್ನು ಹೊಂದಿರುವಂತಹ ಮತ್ತು ಎಲ್ಲಾ ಜಾತಿ, ವರ್ಗಗಳನ್ನು ಭಾವನಾತ್ಮಕವಾಗಿ ಒಂದೆಡೆ ಮೈಲಾರ ಜಾತ್ರೆ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ದೇಗುಲ ಕಾ.ನಿ.ಅಧಿಕಾರಿ ಪ್ರಕಾಶ್ ರಾವ್ ಇತರರಿದ್ದರು.ಪ್ರತಿವರ್ಷದಂತೆ ಈ ವರ್ಷವು ಮೋಜಿನ ಆಟಗಳು, ಜೋಕಲಿಗಳು, ನಾಟಕ ಟೆಂಟ್ಗಳು ಮನೋರಂಜನೆ ನೀಡಿದವು.ಕನ್ನಡ ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. 

ನಾನಾ ಇಲಾಖೆಗಳಿಂದ ವಸ್ತು ಪ್ರದರ್ಶನಗಳು ಹಮ್ಮಿಕೊಳ್ಳಲಾಗಿತ್ತು. ರೈತರ ಕೃಷಿ ಸಲಕರಣೆಗಳು, ಸ್ಟೇಷನರಿ ಅಂಗಡಿಗಳು, ಬಟ್ಟೆ ಅಂಗಡಿಗಳು ವ್ಯಾಪಾರ ಜೋರಾಗಿ ನಡೆದವು. ಸಣ್ಣ ಪುಟ್ಟ ಕಳ್ಳತನ ಹೊರತು ಪಡೆಸಿದರೇ ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿಯುವಾಗಿ ಜಾತ್ರೆ ನಡೆಯಿತು.