ಧಾರವಾಡ.12: ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಡಳಿತ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಂದು ಇಲ್ಲಿನ ಕನರ್ಾಟಕ ಕುಲಪುರೋಹಿತ್ ಆಲೂರು ವೆಂಕಟರಾವ್ ಭವನದಲ್ಲಿ "ಫ್ಯಾಷನ್ ನಡಿಗೆ ಮತದಾನದೆಡೆಗೆ" ಎಂಬ ವಿನೂತನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಭಾರತದ ಪ್ರಜೆಗಳಾದ ನಮಗೆ ಮತದಾನ ಎಂಬುದು ಒಂದು ಸುವರ್ಣ ಅವಕಾಶ. ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕು.
ಸಮರ್ಥ, ಸಮಾಜ ಮುಖಿಯಾದ ಸರಕಾರ ರಚಿಸಲು ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳಬೇಕು ಮತದಾರರು ಯಾವುದೇ ಪ್ರಭಾವಕ್ಕೆ ಒಳಗಾಗದೇ ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಯುವಕರು ತಮ್ಮ ಮತ ಚಾಲಾಯಿಸುವ ಮೂಲಕ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಸಕರ್ಾರಿ ಮಹಿಳಾ ಪ್ರಥಮ ದಜರ್ೆ ಕಾಲೇಜಿನ ಫ್ಯಾಷನ್ ಟೆಕ್ನಾಲಜಿ ವಿಭಾಗದ ವಿದ್ಯಾಥರ್ಿಗಳು ವಿಭಿನ್ನವಾಗಿ ವಿನ್ಯಾಸಗೊಳಿಸಿದ ಉಡುಪುಗಳೊಂದಿಗೆ ರ್ಯಾಂಪ್ ಮೇಲೆ ಮಾಜರ್ಾಲ ನಡಿಗೆ ನಡೆಸಿದ ವಿದ್ಯಾಥರ್ಿ ರೂಪದಶರ್ಿಗಳು ಮತದಾನದ ಸಂದೇಶವನ್ನು ಕೂಡಾ ಸಾರಿದ್ದು ಆಕರ್ಷಕವಾಗಿತ್ತು.
ಗ್ರಾಮೀಣ ಭಾಗದ ಶಾಲಾ ಶಿಕ್ಷಕಿಯರು ಚುನಾವಣಾ ಜಾಗೃತಿ ಗೀತೆಗಳಿಗೆ ಹೆಜ್ಜೆ ಹಾಕಿದರು. ಶಿಕ್ಷಕ ಕಲಾವಿದ ಮಹಾದೇವ ಸತ್ತಿಗೇರಿ ನಗೆಹನಿಗಳ ಮೂಲಕ ಮತದಾರರ ಜಾಗೃತಿಗಾಗಿ ಸಂದೇಶ ಬಿತ್ತರಿಸಿದರು.
ವೇದಿಕೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಬಿ.ಸಿ.ಸತೀಶ್, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿದರ್ೇಶಕಿ ಡಾ .ನೀಲಾಬಿಂಕಾ ಪಟ್ಟಣಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿದರ್ೇಶಕ ಮಂಜುನಾಥ ಡೊಳ್ಳಿನ, ಸ್ವೀಪ್ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಂ. ಶೇಖ್, ಡಾ.ಆರ್.ಬಿ. ಸೋನೆಖಾನ್, ಡಾ.ಸರಸ್ವತಿ ಕಳಸದ ಹಾಗೂ ಇತರರು ಉಪಸ್ಥಿತರಿದ್ದರು.