ಕರೋನ ಸೋಂಕು , 11ನೇ ಸ್ಥಾನದಲ್ಲಿ ರಾಜ್ಯ

ಬೆಂಗಳೂರು,  ಜೂನ್ 5,ರಾಜ್ಯದಲ್ಲಿ  ಕೊರೊನಾಸೋಂಕು ಪ್ರಕರಣಗಳ  ಸಂಖ್ಯೆ  ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ರಾಜ್ಯವಾರು  ಪಟ್ಟಿಯಲ್ಲಿ  ರಾಜ್ಯ  11 ನೇ ಸ್ಥಾನಕ್ಕೇರಿದೆ. ಗುರುವಾರದರೆಗೂ ಕೊರೊನಾ ಸೋಂಕಿತರ ಪ್ರಕರಣಗಳ ಪಟ್ಟಿಯಲ್ಲಿ ರಾಜ್ಯ  12 ನೇ ಸ್ಥಾನದಲ್ಲಿತ್ತು. ಗುರುವಾರ ಒಂದೇ ದಿನ 287 ಸೋಂಕು ಪ್ರಕರಣಗಳು ವರದಿಯಾದ ನಂತರ  ಸೋಂಕಿತರ ಸಂಖ್ಯೆ 4,320 ಕ್ಕೆ ಏರಿಕೆಯಾಗಿದ್ದು, ರಾಜ್ಯವಾರು ಪಟ್ಟಿಯಲ್ಲಿ ಆಂಧ್ರಪ್ರದೇಶವನ್ನು ಹಿಂದಕ್ಕೆ ತಳ್ಳಿ  ಒಂದು ಸ್ಥಾನ ಮೇಲೇರಿದೆ.ಆಂಧ್ರ ಪ್ರದೇಶ  4,112 ಪ್ರಕರಣಗಳೊಂದಿಗೆ 12 ನೇ ಸ್ಥಾನದಲ್ಲಿದ್ದರೆ, 4,420 ಪ್ರಕರಣಗಳೊಂದಿಗೆ ಬಿಹಾರ್ 10 ನೇ ಸ್ಥಾನದಲ್ಲಿದೆ. ದೇಶದಲ್ಲೆ  ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸೋಂಕಿತರಿದ್ದು  ಮೊದಲ ಸ್ಥಾನದಲ್ಲಿದೆ.