ರಾಷ್ಟ್ರ ಪುನರನಿರ್ಮಾಣದ ಕಾರ್ಯದಲ್ಲಿ ಯುವಕರು ಸನ್ನದ್ದರಾಗಬೇಕು: ನಾಗರಾಜ

Youth should be prepared for the task of nation-building: Nagaraja

ರಾಷ್ಟ್ರ ಪುನರನಿರ್ಮಾಣದ ಕಾರ್ಯದಲ್ಲಿ ಯುವಕರು ಸನ್ನದ್ದರಾಗಬೇಕು: ನಾಗರಾಜ 

ಬಳ್ಳಾರಿ 10: ಯುವಕರು ರಾಷ್ಟ್ರದ ಶಕ್ತಿ.ಸದೃಢ ದೇಶ ನಿರ್ಮಾಣ ಮಾಡಲು, ಸದೃಢ ಮನಸ್ಸು ಹಾಗೂ ದೇಹ ಹೊಂದಿರುವ ಯುವಕರಿಂದ ಮಾತ್ರ ಸಾಧ್ಯ ಎಂದು ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ನಾಗರಾಜ ಬಟಗೇರಾ ಅವರು ಹೇಳಿದರು.  ನಗರದ ಬಿ.ಪಿ.ಎಸ್‌.ಸಿ ಶಾಲಾ ಮೈದಾನದಲ್ಲಿ ಎಬಿವಿಪಿ ಹಾಗೂ ಖೇಲೋ ಭಾರತ್ ಬಳ್ಳಾರಿ ಸಹಯೋಗದಿಂದ ಆಯೋಜಿಸಿದ್ದ ಬಲಿದಾನ್ ಟ್ರೋಫಿ ವಾಲಿಬಾಲ್ ಹಾಗೂ ಥ್ರೋ ಬಾಲ್ ಪಂದ್ಯಾವಳಿಯನ್ನು ಉಧ್ಘಾಟಿಸಿ ಮಾತನಾಡಿದರು.   ಇಂದಿನ ವಯುವಕರು - ಇಂದಿನ ಪ್ರಜೆಗಳು ಎನ್ನುವುದು ವಿದ್ಯಾರ್ಥಿ ಪರಿಷತ್ತಿನ ಮಂತ್ರ.ರಾಷ್ಟ್ರದ ಏಳಿಗೆಯಲ್ಲಿ ಅಸಂಖ್ಯಾತ ಯುವಕರು ಸೇವೆ ಸಲ್ಲಿಸಲು ಮುಂದಾಗಬೇಕು.ಸ್ವಾತಂತ್ರ್ಯ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯ ಹೋರಾಟಗಾರರ ಲ್ಲಿ ಯುವಕರದ್ದೆ ಮೇಲುಗೈ ಇತ್ತು.ಆ ಹೊತ್ತಿಗೆ ನೀಡಿದ ಬಲಿದಾನದಿಂದ ಇವತ್ತು ನಾವುಗಳು ಸ್ವಾತಂತ್ರ್ಯ ವಾಗಿ ಜೀವಿಸುತ್ತಿದ್ದೇವೆ.ಆದರೆ ಇವತ್ತು ಯುವಕರು ದೇಶಕ್ಕೋಸ್ಕರ ಬಲಿದಾನ ಮಾಡುವ ಅವಶ್ಯಕತೆ ಇಲ್ಲ..ದೇಶಕ್ಕಾಗಿ ಮೆದುಳು ನೀಡುವುದು ಅವಶ್ಯಕತೆ ಇದೆ ಎಂದರು.  ಎಬಿವಿಪಿ ಯು ಪ್ರತಿ ವರ್ಷ ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರೋತ್ಸಾಹ ನೀಡಲು ಕ್ಯಾಂಪಸ್ ಆವರಣದಲ್ಲಿ ವಿವಿಧ ರೀತಿಯ ಕ್ರೀಡಾ ಸ್ಪರ್ದೆಗಳನ್ನು ಆಯೋಜಿಸುತ್ತೆ.ಇದರಿಂದ ಯುವಕರು ಕ್ರೀಡೆಯಲ್ಲಿ ಆಸಕ್ತಿ ತೋರಿಸಿ, ಕ್ರೀಡಾ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಬೇಕು ಎಂದರು.  ಎಬಿವಿಪಿ ನಗರ ಅಧ್ಯಕ್ಷರಾದ ಜಗದೀಶ ಕನಗೋಲು ಮಾತನಾಡಿ ಎಬಿವಿಪಿ ಯು ಯುವಕರಲ್ಲಿ ದೇಶಭಕ್ತಿಯನ್ನು ತುಂಬಿ,ಸಾಮಾನ್ಯ ವಿದ್ಯಾರ್ಥಿಗಳನ್ನು ಅಸಾಮಾನ್ಯ ವಿದ್ಯಾರ್ಥಿಗಳನ್ನಾಗಿ ತಯಾರು ಮಾಡುವಲ್ಲಿ ಶ್ರಮಿಸುತ್ತಿದೆ. ಜೊತೆಗೆ ಎಲ್ಲಾ ಯುವಕರು ರಾಷ್ಟ್ರೀಯ ವಿಚಾರ ಹಾಗೂ ಸಂಸ್ಕ್ರತಿ ಬಗ್ಗೆ ವಲವನ್ನು ತೋರಿಸಬೇಕು.ಈ ನಿಟ್ಟಿನಲ್ಲಿ ದೇಶಿಯ ಆಟಗಳನ್ನು ಎಬಿವಿಪಿ ಆಯೋಜಿಸುತ್ತದೆ ಎಂದರು.  ಈ ಪಂದ್ಯಾವಳಿಯಲ್ಲಿ ನಗರದ 12 ಕಾಲೇಜಿನಿಂದು ವಿದ್ಯಾರ್ಥಿಗಳು ಭಾಗವಿಸಿದ್ದರು.ವಿದ್ಯಾರ್ಥಿಗಳಿಗಾಗಿ ವಾಲಿಬಾಲ್,ವಿದ್ಯಾರ್ಥಿನಿಯರಿಗಾಗಿ ಥ್ರೋ ಬಾಲ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಅತ್ಯಂತ ಉತ್ಸಾಹದಿಂದ ಯುವಕರು ಆಟಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದರು. ವಾಲಿಬಾಲ್ ಪಂದ್ಯದಲ್ಲಿ ನಗರದ ಇಂಡೋ-ಅಮೇರಿಕನ್ ಕಾಲೇಜಿನ ತಂಡ ಪ್ರಥಮ ಸ್ಥಾನವನ್ನು ಪಡೆದಿದೆ.ತಂಡದ ಮೆಂಟರ್ ಆಗಿದ್ದ ಕೆ.ಆರ್ ವೀಣಾ ಅವರು ಹರ್ಷವನ್ನು ವ್ಯಕ್ತಪಡಿಸಿದರು. ಎರಡನೆ ಸ್ಥಾನವನ್ನು ಪಡೆದ ಸರಳಾದೇವಿ ಕಾಲೇಜು ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು. ಇನ್ನು ವಿದ್ಯಾರ್ಥಿನಿಯರ ಥ್ರೋ ಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಬಿ.ಐ.ಟಿ.ಎಮ್ ಇಂಜಿನಿಯರಿಂಗ್ ಕಾಲೇಜಿನ ತಂಡ ಪಡೆದು ವಿನ್ನರ್ ಆಗಿದ್ದಾರೆ. ನಗರದ ಅಲ್ಲಂ ಸುಮಂಗಳ ಮಹಿಳಾ ಪದವಿ ಕಾಲೇಜಿನ ತಂಡ ಎರಡನೆ ಸ್ಥಾನವನ್ನು ಪಡೆದು ರನ್ನರ ಅಪ್ ಆಗಿ ಹೊರಹೊಮ್ಮಿದ್ದಾರೆ. ಕಾರ್ಯಕ್ರಮನ್ನು ಕು.ಪಂಕಜಾ ಕುಲಕರ್ಣಿ ಯವರು ನಿರೂಪಿಸಿ,ನವಿನ ಅವರು ವಂದಿಸಿದರು. ಈ ಸಂದರ್ಭದಲ್ಲಿ ಕೆ.ಆರ್ ವೀಣಾ, ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಟಿ.ಭರತ್, ಕಾರ್ಯಕರ್ತರಾದ ದರ್ಶನ್, ಅರವಿಂದ, ದೀಲೀಪ್ ಕುಮಾರ, ಮಾರುತಿ, ಸಾಗರ, ಸಂತೋಷ, ಬಸವ, ರೂಪಾಲಿಕಾ, ನವ್ಯ, ಸುರೇಖಾ, ಸುಮೇದಾ ಅವರು ಉಪಸ್ಥಿರಿದ್ದರು.