ಯುವ ಮತದಾರರ ನೋಂದಣಿ ಜಾಗೃತಿ ಕಾರ್ಯಕ್ರಮ

ಗದಗ 03: 18 ಯುವಜನರು ಸೇರಿದಂತೆ ಅರ್ಹ ಮತದಾರರೆಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರನ್ನುನೋಂದಾಯಿಸಿ ಯಾವುದೇ ಆಮಿಷಗಳಿಗೆ ಒಳಗಾಗದೇ ಮತದಾನದ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವ ಸಧೃಡಗೊಳಿಸಲು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕರೇ ನೀಡಿದರು.

ನಗರದ ತೋಂಟದಾರ್ಯ ಇಂಜಿನಿಯರಿಂಗ ಕಾಲೇಜಿನಲ್ಲಿಂದು ಗದಗ ಜಿಲ್ಲಾಡಳಿತ, ಜಿಲ್ಲಾ ಸ್ವೀಪ ಸಮಿತಿ ಹಾಗೂ ತೊಂಟದಾರ್ಯ ಇಂಜಿನಿಯರಿಂಗ ಕಾಲೇಜುಗಳ ಸಹಕಾದಲ್ಲಿ ಜರುಗಿದ ಯವ ಮತದಾರರ ನೋಂದಣಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತಿಚಿನ ಜನಗಣತಿ ಆಧಾರದ ಮೇಲೆ ಜಿಲ್ಲೆಯಲ್ಲಿ ಒಟ್ಟು 39 ಸಾವಿರ ಯುವ ಮತದಾರರಿದ್ದು ಅದರಲ್ಲಿ ಕೇವಲ 9 ಸಾವಿರ ಯುವ ಮತದಾರರು ಮಾತ್ರ ಪಟ್ಟಿಯಲಿ ಸೇರ್ಪಡೆಯಾಗಿದ್ದಾರೆ. ಉಳಿದ ಯುವ ಮತದಾರರು ಇದೇ ದಿ. 20 ರೊಳಗೆ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಮುಂದಾಗಲು ಜಿಲ್ಲಾಧಿಕಾರಿ ಮನವಿ ಮಾಡಿದರು. 01-01-2019ಕ್ಕೆ 18 ವರ್ಷ ಪೂರ್ಣಗೊಳಿಸುವ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಅವಕಾಶವಿದ್ದು ನಮೂನೆ 6ನ್ನು ಭತರ್ಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ನೀಡಬೇಕು. ಎಲ್ಲ ಯುವಜನರು ಕೊನೆ ದಿನದ ವರೆಗೆ ಕಾಯದೇ ಜಾಗೃತರಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ ಮಾತನಾಡಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳ ಮೂಲಕ ಅರ್ಹ ಮತದಾರರು ತಮ್ಮ ಹೆಸರನ್ನು ಸೇರಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿತ್ತು 01-01-2019ಕ್ಕೆ   18 ವರ್ಷ ಪೂರೈಸುವ ಯುವಜನರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗಬೇಕು ಎನ್ನುವದು ಜಿಲ್ಲಾ ಸ್ವೀಪ್ ಸಮಿತಿಯ ಮುಖ್ಯ ಉದ್ದೇಶವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿ ಕೊಳ್ಳಲು ವಿದ್ಯಾಥರ್ಿಗಳು ನಮೂನೆ 6ರನ್ನು ಆದಷ್ಟು ಬೇಗನೆ ಭತರ್ಿ ಮಾಡಿ ಜೊತೆಗೆ ತಮ್ಮ ಸಂಬಂಧಿಕರಲ್ಲಿ, ನೆರೆಹೊರೆಯವರಲ್ಲಿ ಹೆಸರನ್ನು ಸೇರ್ಪಡೆಗೊಳಿಸಬೇಕಾಗಿದ್ದಲ್ಲಿ ಅಂತಹವರ ಅಜರ್ಿಯನ್ನು ಭತರ್ಿ ಮಾಡಿ 20-11-2018ರ ಒಳಗಾಗಿ ಕಾಲೇಜಿನ ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಿಗೆ ಸಲ್ಲಿಸಲು ಮಂಜುನಾಥ ಚವ್ಹಾಣ ತಿಳಿಸಿದರು. ವಿಧ್ಯಾಥರ್ಿಗಳು ತಮ್ಮ ಕೈಯಲ್ಲಿರುವ ಹಕ್ಕನ್ನು ಜಾತಿ,ಮತ, ಹಣದ ಆಮಿಷಕ್ಕೊಳಗಾಗೇ ನೈತಿಕವಾಗಿ ಚಲಾಯಿಸಿ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೀಡಲು ಮಂಜುನಾಥ ಚವ್ಹಾಣ ಕರೇ ನೀಡಿದರು. 

ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದಶರ್ಿ ಟಿ.ದಿನೇಶ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.