ಧಾರವಾಡ 13 : ಇಲ್ಲಿಯ ವೀರಶೈವ ಜಂಗಮ ಸಂಸ್ಥೆಯು ಹಮ್ಮಿಕೊಳ್ಳುತ್ತಿರುವ ನಿರಂತರ ಉಪನ್ಯಾಸ ಮಾಲಿಕೆಯಲ್ಲಿ 165ನೆಯ ಉಪನ್ಯಾಸ ರವಿವಾರ (ಏ. 14 ರಂದು) ಸಂಜೆ 5 ಗಂಟೆಗೆ ನಗರದ ಬೆಳಗಾವಿ ರಸ್ತೆಗೆ ಹೊಂದಿಕೊಂಡು ನರೇಗಲ್ಲ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ತತ್ವಾನ್ವೇಷಣ ಮಂದಿರದ ಹೊಸ ಕಟ್ಟಡದಲ್ಲಿ ಜರುಗಲಿದೆ.
'ಉತ್ತಮ ಆರೋಗ್ಯಕ್ಕಾಗಿ ಯೋಗ' ಎಂಬ ವಿಷಯವಾಗಿ ಕೇರಳ ಮೂಲದ ಹೆಸರಾಂತ ನಾಡಿವೈದ್ಯ ರವಿಶಂಕರ ಕೃಷ್ಣಮೂತರ್ಿ ಉಪನ್ಯಾಸ ನೀಡುವರು. ಜೊತೆಗೆ ಯೋಗ ಸಾಧನೆಯ ಪ್ರಾತ್ಯಕ್ಷಿಕೆಯನ್ನೂ ಮಾಡಿ ತೋರಿಸುವರು. ಎಸ್.ಬಿ.ಐ. ನಿವೃತ್ತ ಅಧಿಕಾರಿಗಳಾದ ಪಂಪಾಪತಿ ಹಿರೇಮಠ, ನಿವೃತ್ತ ಕೆ.ಎ.ಎಸ್. ಅಧಿಕಾರಿ ಬಿ.ಎಸ್. ಬಿದರಿಮಠ, ಜಿಲ್ಲಾ ಆಸ್ಪತ್ರೆಯ ನಿವೃತ್ತ ಸರ್ಜನ್ ಡಾ|| ಆರ್.ಜಿ. ಪುರಾಣಿಕ, ಖ್ಯಾತ ಆಯುವರ್ೆದ ವೈದ್ಯ ಡಾ. ಮಹಾಂತಸ್ವಾಮಿ ಹಿರೇಮಠ, ಜಂಗಮ ಸಮಾಜದ ಹಿರಿಯರಾದ ಜಿ. ಜಿ. ಹಿರೇಮಠ, ಸಿ.ಆರ್. ಹಳ್ಳಿಗೇರಿಮಠ, ವ್ಹಿ.ಎಸ್.ಹಿರೇಮಠ, ಸಿ.ಎಸ್. ಪಾಟೀಲಕುಲಕಣರ್ಿ, ಎಂ.ಸಿ.ಹಿರೇಮಠ ಮುಂತಾದವರು ಪಾಲ್ಗೊಳ್ಳುವರು.
ವೀರಶೈವ ಜಂಗಮ ಸಂಸ್ಥೆಯ ಅಧ್ಯಕ್ಷ ಹಾಗೂ ಸಹಾಯಕ ನಿವೃತ್ತ ಪೊಲೀಸ್ ಆಯುಕ್ತ ಜಿ. ಆರ್. ಹಿರೇಮಠ ಅಧ್ಯಕ್ಷತೆವಹಿಸುವರು. ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಜಿ.ಜಿ. ಹಿರೇಮಠ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸುವರು. ಸರ್ವ ಸದಸ್ಯರು ಆರಂಭದ ಸಾಮೂಹಿಕ ಪ್ರಾರ್ಥನೆಯಲ್ಲಿ ತಪ್ಪದೇ ಪಾಲ್ಗೊಳ್ಳಬೇಕೆಂದು ಮಾಧ್ಯಮ ಪ್ರಕಟಣೆಯಲ್ಲಿ ಕೋರಲಾಗಿದೆ.