ಯೋಗದಿಂದ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯ: ಪಾಟೀಲ್

ಯೋಗದಿಂದ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯ: ಪಾಟೀಲ್

ಇಂಡಿ 18: ಯೋಗಾಭ್ಯಾಸದಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ ಈ ಮೂಲಕ ವಿದ್ಯಾರ್ಥಿಯು ತಮ್ಮ ಒತ್ತಡದ ಪ್ರತಿಕ್ರಿಯೆ ವ್ಯವಸ್ಥೆಯನ್ನು ಮಾರಿ​‍್ಡಸಲು ಸಾಧ್ಯವಾಗುತ್ತದೆ. ಇದು ಪ್ರತಿಯಾಗಿ, ಶಾರೀರಿಕ ಉತ್ಸಾಹವನ್ನು ಹೆಚ್ಚುಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುವುದು ಎಂದು ಇಂಗ್ಲಿಷ್ ಶಿಕ್ಷಕ ಬಿ ಎಸ್ ಪಾಟೀಲ್ ಹೇಳಿದರು.ಇಂಡಿ ಸಿವಿ ರಾಮನ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಏರಿ​‍್ಡಸಲಾಗಿದ್ದ ಒಂದು ದಿನದ ಯೋಗ ಅಭ್ಯಾಸ  ಕಾರ್ಯಗಾರ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು ಒಂದು ದಿನದ ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

ನಂತರ ಮಾತನಾಡಿದ ಕಾಲೇಜು ಸ್ಥಾಪಕ ಶಿವಾನಂದ ಕಾಮಗೊಂಡ ಅವರು ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಲೆಂದು ಈ  ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು. 

ತೇಜಸ್ವಿನಿ ಗೊಳ್ಳಗಿ ಮಾತನಾಡಿ ಯೋಗ ಅಭ್ಯಾಸ ದೇಹಕ್ಕೆ ಮತ್ತು ಮನಸ್ಸಿಗೆ ಚೈತನ್ಯವನ್ನು ಕೊಡುತ್ತದೆ ಎಂದು ಹೇಳಿದರು.ಮಂಜುನಾಥ ಬಾಲಗಾವ, ಶಂಕರ್ ಬಡಿಗೇರ ಸೇರಿದಂತೆ ಅನೇಕರು ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಮಹಾವೀರ ವರ್ಧಮಾನ್, ಶೈಲೇಶ್ ಬಿಳಗಿ, ಸನ್ಮತಿ ಹಳ್ಳಿ, ಪ್ರಸನ್ನ ಕುಮಾರ್ ನಾಡಗೌಡ, ಶೋಭಾ ನಾರಾಯಣ ಕರ್, ಶೈಲಜಾ ಜಹಗಿರದರ್ ಉಪಸ್ಥಿತರಿದ್ದರು.