ದೇವಋಷಿ ಅಪ್ಪಣ್ಣನವರ ಪುಣ್ಯಸ್ಮರಣೆ: ಸಾಧಕರಿಗೆ ಪ್ರಶಸ್ತಿ ಪ್ರದಾನ
ದೇವಋಷಿ ಅಪ್ಪಣ್ಣನವರ ಪುಣ್ಯಸ್ಮರಣೆ: ಸಾಧಕರಿಗೆ ಪ್ರಶಸ್ತಿ ಪ್ರದಾನ
ಚಿಕ್ಕೋಡಿ: ಗ್ರಾಮದ ಹಿರಿಯರಿಗೆ ಗೌರವ ಕೊಟ್ಟು ವಯಸ್ಸಾದ ತಂದೆ-ತಾಯಿಯನ್ನು ದೇವರೆಂದು ಪೂಜಿಸುವ ಮನೆಗಳು ನಿರ್ಮಾಣವಾದರೆ ಮಾತ್ರ ಪರಿಪಕ್ವ ಸುಸಂಸ್ಕೃತ ಗ್ರಾಮವಾಗಲು ಸಾಧ್ಯ ಎಂದು ಮಜಲಟ್ಟಿಯ ಬಸವಪ್ರಭು ಮಹಾರಾಜರು ಹೇಳಿದರು.
ತಾಲೂಕಿನ ಮಜಲಟ್ಟಿ ಗ್ರಾಮದ ದುರ್ಗಾದೇವಿ ದೇವಸ್ಥಾನ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ದೇವಸ್ಥಾನದ ದೇವಋಷಿ ಅಪ್ಪಣ್ಣನವರ ಪುಣ್ಯಸ್ಮರಣೆ ನಿಮಿತ್ಯ ಶಿಲ್ಪ ಕಲಾವಿದ ಕೆ.ರಮೇಶ ನೇತೃತ್ವದಲ್ಲಿ ಆಯೋಜಿಸಿದ್ದ ಹಿರಿಯರ ಸನ್ಮಾನ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೋಡಕುರಳಿಯ ಚಿದ್ದನಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ದೇವಋಷಿ ಅಪ್ಪಣ್ಣನವರು ದುರ್ಗಾದೇವಿಯ ಆರಾಧಕರಾಗಿದ್ದರೆ, ಅವರ ಪುತ್ರ ಶಿಲ್ಪ ಕಲೆಯ ಆರಾಧಕರಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಸವದತ್ತಿಯ ಮಾತೋಶ್ರೀ ಶಿವಯೋಗಿನಿದೇವಿ ಮಾತನಾಡಿದರು. ಉಪನ್ಯಾಸಕ ವಿಶ್ವನಾಥ ಕೋಳದೂರ ಅವರಿಗೆ 'ಶಿಕ್ಷಣ ಶ್ರೀ' ಪ್ರಶಸ್ತಿ, ಲಕ್ಷ್ಮಣ ಶಿರಗನ್ನವರ 'ದೇವಋಷಿ ಅಪ್ಪಣ್ಣ ಶ್ರೀ' ಪ್ರಶಸ್ತಿ, ಹುಸೇನ್ ಮುಲ್ಲಾ, ಪಿಡಿಒ ಶಾಂತೇಶ ಬಾಡಕರ, ಶಿಕ್ಷಕ ರಾಜು ದೇವಋಷಿ, ನಿವೃತ್ತ ಸೈನಿಕ ದಯಾನಂದ ಕಾಂಬಳೆ ಅವರಿಗೆ ಬಿ.ಆರ್. ಸಂಗಪ್ಪಗೋಳ ಶಿಕ್ಷಣ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರುದ್ರಾ್ಪ ಸಂಗಪ್ಪಗೋಳ, ಶಂಕರಗೌಡಾ ಪಾಟೀಲ, ಸಿದ್ದಗೌಡ ಪಾಟೀಲ, ವಿಜಯ ಸಂಗಪ್ಪಗೋಳ, ಮುಲ್ಲಾ ಗುರುಗಳು, ವಸವಣ್ಣಿ ವಾಲಿಕಾರ, ಸಾತಯ್ಯ ಪೂಜಾರಿ, ಬಾಳಪ್ಪ ಸನದಿ, ವಿಠ್ಠಲ ತಳವಾರ, ಮಾರುತಿ ಸನದಿ, ಬಸಪ್ರಭು ವಾಲಿಕಾರ, ಸಿದ್ದಪ್ಪ ಸಂಕೇಶ್ವರಿ, ಮಾರುತಿ ಸಂಗನಗೋಳ, ಶ್ರೀಮಂತ ಚೌಗಲಾ, ಈರ್ಪ ಸಂಗಪ್ಪಗೋಳ, ರಾಮಯ್ಯ ಪೂಜಾರಿ, ಬಾಳಪ್ಪ ಕರೋಲಿ, ಗುಳಪ್ಪ ನಾಯಿಕ ಮುಂತಾದವರು ಇದ್ದರು.
ಇದ್ದರು. ಕೆ.ರಮೇಶ ಸ್ವಾಗತಿಸಿದರು. ಡಾ. ವಿಶ್ವನಾಥ ಧುಮಾಳ ನಿರೂಪಿಸಿ, ವಂದಿಸಿದರು.