ಯತ್ನಾಳ ಉಚ್ಚಾಟನೆ: ಜನರು ಸಾಂದರ್ಬಿಕ ಉತ್ತರ ಕೊಡುತ್ತಾರೆಸತ್ತ ಮೇಲೆ ಪೋಸ್ಟ್ ಮಾರ್ಟಂ ಮಾಡುವುದು ಅವಶ್ಯಕತೆ ಇಲ್ಲ : ಲಕ್ಷ್ಮಣ್ ಸವದಿ
ಅಥಣಿ, 07 : ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಚಿಂತನೆ ಪ್ರಾರಂಭವಾಗಿದೆ, ಸಂದರ್ಭ ಅನುಸಾರವಾಗಿ ಬಿಜೆಪಿ ಪಕ್ಷಕ್ಕೆ ಏನು ಉತ್ತರ ಕೊಡಬೇಕು ಮುಂದೆ ಈ ಬಾಗದ ಜನ ಕೊಡುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿ ಪಕ್ಷಕ್ಕೆ ಅಥಣಿ ಶಾಸಕ ಲಕ್ಷ್ಮಣ್ ಸವದಿ ಎಚ್ಚರಿಕೆ ನೀಡಿದರು.
ಅವರು ಸೋಮವಾರ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಅಮುಜೇಶ್ವರಿ ಏತ ನೀರಾವರಿ ಯೋಜನೆಯ ಚಾಕವೇಲ್ ಕಂಮ್ ಪಂಪ್ ಹೌಸ್ ನಿರ್ಮಾಣ ಹಂತಕ್ಕೆ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡುತ್ತಾ, ನಾನು ಓರ್ವ ಕಾಂಗ್ರೆಸ್ ಪಕ್ಷದ ಸದಸ್ಯ ಬೇರೆ ಪಕ್ಷದ ಚಿಂತನೆ ಬೇರೆ ಪಕ್ಷದಲ್ಲಿ ಆಗುತ್ತಿರುವ ವಿದ್ಯಮಾನಗಳು ನಡೆದರೂ ನನಗೆ ಸಂಬಂಧಿಸಿದಲ್ಲ, ಆ ಪಕ್ಷದಲ್ಲಿ ಅಲ್ಲಿ ಏನೇ ಆದರೂ ಅವರ ಪಕ್ಷಕ್ಕೆ ಬಿಟ್ಟು ಕೊಟ್ಟಿದ್ದು ಅವರು ಅಲ್ಲಿ ಏನೇ ಮಾಡಿದರು ನಾವು ಚಿಂತನೆ ಮಾಡುವುದು ಸರಿಯಲ್ಲ ಎಂಬುದು ನನ್ನ ಭಾವನೆ, ನಾನು ಕೂಡ ಹಿಂದೆ ಬಿಜೆಪಿಯಲ್ಲಿದ್ದೆ ಆದರೆ ಸದ್ಯ ನಾನು ಕಾಂಗ್ರೆಸ್ ಪಕ್ಷದ ಶಾಸಕ ಅವರ ಪಕ್ಷದ ಆಂತರಿಕ ವಿಚಾರ ಚರ್ಚೆ ಮಾಡುವುದು ಸೂಕ್ತವಲ್ಲ, ನಮಗೆ ಸಂಬಂಧಪಟ್ಟ ವಿಷಯವು ಅಲ್ಲವೆಂದು ಹೇಳಿದರು.
ಉತ್ತರ ಕರ್ನಾಟಕ ನಾಯಕರಿಗೆ ಬಿಜೆಪಿ ಪಕ್ಷದಿಂದ ಅನ್ಯಾಯ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ವಿಚಾರಕ್ಕೆ ಮಾತನಾಡಿ, ಜನ ಇದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ, ಉತ್ತರ ಕರ್ನಾಟಕದಲ್ಲಿ ಇದರ ಬಗ್ಗೆ ಚಿಂತನೆ ಪ್ರಾರಂಭವಾಗಿದೆ, ಸಂದರ್ಭ ಅನುಸಾರವಾಗಿ ಉತ್ತರ ಕರ್ನಾಟಕ ಜನ ಯಾವಾಗ ಉತ್ತರ ಕೊಡಬೇಕು ಅವಾಗ ಉತ್ತರವನ್ನು ನೀಡುತ್ತಾರೆ ಎಂದು ಯತ್ನಾಳ್ ಉಚ್ಚಾಟನೆಯನ್ನು ಪರೋಕ್ಷವಾಗಿ ಸವದಿ ಖಂಡಿಸಿದರು.
ಕೇಂದ್ರ ಸರ್ಕಾರ ವಕ್ಫ್ ಕಾನೂನಿಗೆ ತಿದ್ದುಪಡಿ ವಿಚಾರವಾಗಿ ಲಕ್ಷ್ಮಣ್ ಸವದಿ ಮಾತನಾಡಿ ಸತ್ತ ಮೇಲೆ ಪೋಸ್ಟ್ ಮಾರ್ಟಂ ಮಾಡುವುದು ಅವಶ್ಯಕತೆ ಇಲ್ಲ, ವಕ್ಫ್ ಎಂಬುವುದು ಮುಗಿದು ಹೋಗಿದೆ, ಎನ್.ಡಿ.ಎ ಸರ್ಕಾರ ಬಿಟ್ಟು ಎಲ್ಲ ಪಕ್ಷಗಳು ಕೂಡ ವಿರೋಧ ಮಾಡಿದೆ, ಓಆಂ ಸರ್ಕಾರಕ್ಕೆ ಬಹುಮತ ಇರೋದ್ರಿಂದ ಅವರು ಕಾನೂನನ್ನು ತಿದ್ದುಪಡಿ ಮಾಡಿದ್ದಾರೆ, ಮುಂದಿನ ದಿನದಲ್ಲಿ ನೋಡೋಣ ಅದರ ಸಾಧಕ ಪಾದಕ ಏನಾಗುತ್ತದೆ ಇನ್ನು ನ್ಯಾಯಾಲಯಗಳು ಇರುವುದರಿಂದ ಕೆಲವು ವರಿಷ್ಠರು ನ್ಯಾಯಾಲಯಕ್ಕೆ ಹೋಗುವ ಚರ್ಚೆಯನ್ನು ಮಾಡ್ತಾ ಇದ್ದಾರೆ ಎಂದು ಸವದಿ ತಿಳಿಸಿದರು.
ಗ್ಯಾರೆಂಟಿ ಯೋಜನೆಗಳ ಮಧ್ಯೆ ಅಥಣಿ ಕ್ಷೇತ್ರಕ್ಕೆ ಬರಪೂರ ಅನುದಾನ ಬಿಡುಗಡೆ ವಿಷವಾಗಿ ಮಾಜಿ ಡಿಸಿಎಂ ಸವದಿ ಮಾತನಾಡುತ್ತಾ, ಬಿಜೆಪಿ ಪಕ್ಷ ತೊರೆದು ನಾನು ಕಾಂಗ್ರೆಸ್ ಪಕ್ಷ ಸೇರುವಾಗಲೇ ಕರಾರು ಒಕ್ಕವಾಗಿ ಕ್ಷೇತ್ರ ಅಭಿವೃದ್ಧಿ ಬಗ್ಗೆ ಅನುದಾನ ಕೇಳಿದೆ, ಕೆಲವು ಬೇಡಿಕೆಗಳನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ, ಅದರ ಅನುಗುಣವಾಗಿಯೇ ನನಗೆ ಅನುದಾನ ಬಿಡುಗಡೆಯಾಗುತ್ತಿದೆ, ಬೃಹತ್ಕಾರದ ಅಮ್ಮಜೇಶ್ವರಿಗೆ ನೀರಾವರೆ ಯೋಜನೆ, ಅಗ್ರಿ ಕಾಲೇಜು, ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಇಡಲಾಗಿತ್ತು, ಎರಡು ಬೇಡಿಕೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಡೇರಿಸಿದ್ದಾರೆ ಇನ್ನು ಒಂದು ಬೇಡಿಕೆ ಬಾಕಿ ಉಳಿದಿದೆ, ಕ್ಷೇತ್ರ ಅಭಿವೃದ್ದಿಗೋಸ್ಕರವಾಗಿ ಕರಾರು ಒಕ್ಕವಾಗಿ ನಾನು ಕಾಂಗ್ರೆಸ್ ಪಕ್ಷವನ್ನು ಸೇರಿದೆ, ಗ್ಯಾರೆಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ ಎಂದು ನಾನು ಹೇಳೋಕೆ ಬರುವುದಿಲ್ಲ, ನನ್ನ ಕ್ಷೇತ್ರಕ್ಕೆ ಅನುದಾನ ಬರುತ್ತಿದೆ, ಮತ್ತು ನಾನು ಬೇಡಿಕೆ ಇಟ್ಟ ಯೋಜನೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ ಎಂದು ಹೇಳಿದರು.ಈ ವೇಳೆ ಯುವ ನಾಯಕ ಚಿದಾನಂದ ಸವದಿ,ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೋಘ ಖೊಬ್ರಿ,(ವಕೀಲರು)ಸಿದರಾಯ ಯಲಡಗಿ, ಶಿವು ಗುಡ್ಡಾಪುರ, ಶೇಖರ ನೇಮಗೌಡರ, ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳಾದ ನಾಗರಾಜ್, ಪ್ರವೀಣ ಹುಣಸಿಕಟ್ಟಿ, ಮಾತನಾಡಿದರು.