ಲೋಕದರ್ಶನ ವರದಿ
ಯರಗಟ್ಟಿ 09: ಯರಗಟ್ಟಿ ನೂತನ ತಾಲೂಕಾ ಘೋಷಣೆ ಆಗಿರುವುದು ಎಲ್ಲರಲ್ಲಿಯೂ ಸಂತೋಷ ಉಂಟು ಮಾಡಿದ್ದು ಸಾರ್ವಜನಿಕರ ಆಡಳಿತಾತ್ಮಕ ಹಿತದೃಷ್ಠಿಯಿಂದ ತಾಲೂಕಾ ಆಡಳಿತ ಇಲಾಖೆಗಳ ಕಛೇರಿಗಳನ್ನು ಶೀಘ್ರ ನಿಮರ್ಿಸಲು ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ರಾಜ್ಯ ಸಕರ್ಾರವನ್ನು ಒತ್ತಾಯಿಸುವುದಾಗಿ ಶಾಸಕ ಆನಂದ ಮಾಮನಿ ಹೇಳಿದರು.
ಇಲ್ಲಿನ ಎಮ್.ಜಿ.ರಸ್ತೆಯಲ್ಲಿ ನಡೆದ ನೂತನವಾಗಿ ಯರಗಟ್ಟಿ ತಾಲೂಕಾ ಘೋಷಣೆಯ ವಿಜಯೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಪಂಚನಗೌಡ ದ್ಯಾಮನಗೌಡರ ಮಾತನಾಡಿ ಈ ಭಾಗದ ಪ್ರತಿಯೊಬ್ಬರ ಹೋರಾಟದ ಫಲವಾಗಿ ಯರಗಟ್ಟಿ ತಾಲೂಕ ಘೋಷಣೆ ಆಗಿದೆ. ಮುನವಳ್ಳಿಯನ್ನು ಯರಗಟ್ಟಿ ತಾಲೂಕಿಗೆ ಸೇರಿಸಲು ಒತ್ತಾಯಿಸುವುದಾಗಿ ತಿಳಿಸಿದರು.
ಭಾಗೋಜಿಕೊಪ್ಪ ಹಿರೇಮಠದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಶ್ರೀಗಳು ಸಾನಿದ್ಯ ವಹಿಸಿ ಮಾತನಾಡುತ್ತಾ ತಾಲೂಕಾ ಹೋರಾಟದಲ್ಲಿ ಪಾಲ್ಗೊಂಡು ಯಶಶ್ವಿಯಾದ ನಂತರ ವೈಮನಸ್ಸನ್ನು ಹೊಂದದೆ ಯರಗಟ್ಟಿ ತಾಲೂಕು ಆಗಿದೆ ಎಂದು ಕೈಕಟ್ಟಿ ಕುಳಿತುಕೊಳ್ಳದೆ ಎಲ್ಲರೂ ಒಗ್ಗಟ್ಟಾಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ರಾಜ್ಯ ರೈತ ಸೇನೆ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಸ್ವಾಮಿಜಿ, ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ನಿವೃತ್ತ ಶಿಕ್ಷಕ ಎ.ಕೆ.ಜಮಾದಾರ, ಆರ್.ಎಲ್.ಜುಗನವರ ಮಾತನಾಡಿದರು. ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ಯರಝವರ್ಿ ಜಿ.ಪಂಸದಸ್ಯೆ ವಿದ್ಯಾರಾಣಿ ಸೊನ್ನದ, ತಾ.ಪಂ.ಅಧ್ಯಕ್ಷ ವಿನಯ್ಕುಮಾರ ದೇಸಾಯಿ, ತಾ.ಪಂ.ಸದಸ್ಯೆ ಮಂಜುಳಾ ಕರಿಗೊಣ್ಣವರ, ಗ್ರಾ.ಪಂ.ಅದ್ಯಕ್ಷೆ ಕಸ್ತೂರಿ ಕಡೆಮನಿ, ಉಪಾಧ್ಯಕ್ಷೆ ಲಕ್ಷ್ಮೀ ಸೊನ್ನದ, ಕರವೇ ತಾಲೂಕಾ ಯುವ ಘಟಕಾದ್ಯಕ್ಷ ರಫೀಕ್.ಡಿ.ಕೆ, ರೈತ ಸೇನೆ ಘಟಕಾದ್ಯಕ್ಷ ಪ್ರವೀಣ ಪಠಾತರ, ಸಂಜು ಚನ್ನಮೇತ್ರಿ, ಡಾ.ಕೆ.ವ್ಹಿ.ಪಾಟೀಲ, ಪರ್ವತಗೌಡ ಪಾಟೀಲ, ಡಾ.ಶಂಕರಲಿಂಗಪ್ಪ, ಬಸನಗೌಡ ಪಾಟೀಲ, ವೆಂಕಣ್ಣ ಕೊಪ್ಪದ, ನೀಲಪ್ಪಾ ಬಾಕರ್ಿ, ವಿಠ್ಠಲಗೌಡ ದೇವರಡ್ಡಿ, ಕಲ್ಲೋಳೆಪ್ಪ ಸಿದ್ದನ್ನವರ, ಶಿವಾನಂದ ಕರಿಗೊನ್ನವರ, ಗ್ರಾ.ಪಂ.ಸರ್ವ ಸದಸ್ಯರು, ಸತ್ತಿಗೇರಿ, ಸೊಪ್ಪಡ್ಲ, ಮುಗಳಿಹಾಳ, ಅಕ್ಕಿಸಾಗರ, ಮಾಡಮಗೇರಿ, ಕೋ-ಶಿವಾಪೂರ, ಕಡಬಿ, ಯರಝವರ್ಿ, ಆಲದಕಟ್ಟಿ.ಕೆ.ಎಮ್, ತಲ್ಲೂರ, ಮದ್ಲೂರ ಗ್ರಾಮ ಪಂಚಾಯತಿಗಳ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿವಾನಂದ ಕರ್ಜಗಿಮಠ ನಿರೂಪಿಸಿದರು. ಸುಭಾನಿ ಹುಕ್ಕೇರಿ ವಂದಿಸಿದರು.