ಲೋಕದರ್ಶನ ವರದಿ
ಯಲುಬುರ್ಗಾ 17: ಈ ನಗರವು ಶಾಂತಿಯತೆಗೆ ಹೆಸರಾದಂತಹ ನಗರವಾಗಿದೆ ಇಲ್ಲಿ ಯಾವುದೇ ಕೋಮು ದ್ವೇಷಗಳಾಗಲಿ ಜಾತಿ ವೈರಾಗ್ಯಗಳಾಗಲಿ ಇಲ್ಲಿಯ ಜನರ ಮನಸಲ್ಲಿ ಇರುವದಿಲ್ಲಾ ಎಂದು ಸಿಪಿಐ ರಮೇಶ ರೊಟ್ಟಿ ಹೇಳಿದರು.
ಪಟ್ಟಣದ ಪೋಲಿಸ್ ಠಾಣೆಯಲ್ಲಿ ಹೊಳಿ ಹಬ್ಬದ ನಿಮಿತ್ಯ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲರೂ ಒಟ್ಟುಗೂಡಿ ಶಾಂತಿಯುತವಾಗಿ ಹಬ್ಬವನ್ನು ಮಾಡಬೇಕು ಹಾಗೂ ರಸ್ತೆಯಲ್ಲಿ ಹಗ್ಗವನ್ನು ಹಾಕಿ ಯಾರು ಸಾರ್ವಜನಿಕರಿಂದ ಹಣ ವಸೂಲಿ ಮಾಡಬಾರದು ಹಾಗೂ ಚರ್ಮಕ್ಕೆ ಹಾನಿಯಾಗುವಂತಹ ಬಣ್ಣವನ್ನು ಉಪಯೋಗಿಸಬಾರದು ಎಂದರು.
ಮುಖಂಡರಾದ ಶ್ರೀಪಾದಪ್ಪ ಅಧಿಕಾರಿ ಮಾತನಾಡಿ ನಮ್ಮ ನಗರದಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆದ ಉದಾಹರಣೆಗಳೆ ಇಲ್ಲಾ ಇಲ್ಲಿಯ ಯುವಕರು ಸರ್ವದಮರ್ಿಯರ ಜೊತೆ ಉತ್ತಮ ಬಾಂದವ್ಯ ಹೊಂದಿದ್ದು ಸಹೋದರರಂತೆ ಸಹಬಾಳ್ವೆ ನಡೆಸುತ್ತಿದ್ದಾರೆ ಅದರಂತೆ ಈ ಹಬ್ಬದಲ್ಲಿಯೂ ಎಲ್ಲರೂ ಶಾಂತಿಯುತವಾಗಿ ವತರ್ಿಸಬೇಕು ಎಂದರು. ಪಿಎಸ್ಐ ಬಸವರಾಜ ಅಡವಿಭಾವಿ ಮಾತನಾಡಿ ಈ ಬಾರಿ ಲೋಕಸಭಾ ಚುನಾವಣೆ ಹಾಗೂ ಹೋಳಿ ಹಬ್ಬವು ಒಟ್ಟಿಗೆ ಬಂದಿರುವದರಿಂದ ಪೋಲಿಸ್ ಇಲಾಖೆಯಿಂದ ಅತ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಆದ್ದರಿಂದ ಯಾರು ಕಾನೂನನ್ನು ಮೀರಿ ವತರ್ಿಸಬಾರದು ಅಂತಹವರು ಕಂಡು ಬಂದರೆ ಅವರ ವಿರುದ್ದ ನಿದರ್ಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ನಮ್ಮ ಇಲಾಖೆ ಸನ್ನದ್ದಾವಾಗಿದೆ ಡಿಜೆಗೆ ಅವಕಾಶವಿಲ್ಲಾ ಎಂದರು,
ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಅಂದಾನಗೌಡ ಉಳ್ಳಾಗಡ್ಡಿ, ಅಕ್ತರಸಾಬ ಖಾಜಿ, ಎಂ ಎಪ್ ನಧಾಪ್, ರೇವಣೆಪ್ಪ ಹಿರೇಕುರುಬರ, ವಸಂತ ಭಾವಿಮನಿ, ಸಂಗಣ್ಣ ಟೆಂಗಿನಕಾಯಿ, ವಿಜಯಕುಮಾರ ಕರಂಡಿ, ಮಹಮ್ಮದ್ ಇಕ್ಬಾಲ್ ವಣಗೇರಿ, ಕಳಕಪ್ಪ ತಳವಾರ, ಗೌಸುಸಾಬ ಕನಕಗಿರಿ, ಬಸವಲಿಂಗಪ್ಪ ಕೊತ್ತಲ, ಅಮರಪ್ಪ ಕಲಬುರ್ಗಿ , ಶರಣಪ್ಪ ಕರಂಡಿ, ಅಶೋಕ ಅರಕೇರಿ ಸೇರಿದಂತೆ ಅನೇಕ ಮುಖಂಡರು ಪೋಲಿಸ್ ಸಿಬ್ಬಂದಿಗಳು ಹಾಜರಿದ್ದರು.