ಜಾಹೀರಾತುದಾರರ ಸುದ್ದಿ ನಾಳೇಯೇ ಪ್ರಕಟಿಸಲು ಕೋರಿಕೆನಿರ್ಮಲ ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ್ ಡೇ;
ಕಾಗವಾಡ 11 : ಮದ್ಯಪಾನ, ತಂಬಾಕು ಸೇವನೆ ಹಾಗೂ ಇನ್ನಿತರ ವ್ಯಸನಗಳಿಂದ ದೇಹದ ಮೇಲೆ ದುಷ್ಪರಿಣಾಮ ಬೀರುವ ಜೊತೆಗೆ ಪಿತ್ತಜನಕಾಂಗದ ಕಾಯಿಲೆ, ಹೃದ್ರೋಗ, ಜೀಣಾಂರ್ಗ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮಗಳು ಉಂಟಾಗಿ ಕ್ಯಾನ್ಸರ್‌ನಂತ ಭಯಂಕರ ರೋಗಕ್ಕೆ ತುತ್ತಾಗುವ ಸಾಧ್ಯೆತೆಗಳು ಹೆಚ್ಚಾಗಿರುತ್ತವೆಂದು ಮಿರಜ್‌ನ ನಿರ್ಮಲ ಆಸ್ಪತ್ರೆ ಮತ್ತು ವ್ಯಸನಮುಕ್ತಿ ಕೇಂದ್ರದ ಸಂಸ್ಥಾಪಕ ಡಾ. ಚಂದ್ರಶೇಖರ ಹಳಿಂಗಳೆ ತಿಳಿಸಿದ್ದಾರೆ.ಇತ್ತಿಚಿಗೆ ವಿಶ್ವ ಕ್ಯಾನ್ಸರ್ ದಿನದ ನಿಮಿತ್ಯವಾಗಿ ಮಿರಜ್‌ನ ನಿರ್ಮಲ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ‘ವ್ಯಸನದಿಂದ ಉಂಟಾಗುವ ಕ್ಯಾನ್ಸರ್ ಮತ್ತು ಅದರ ತಡೆಗಟ್ಟುವಿಕೆ’ ಕುರಿತು ಮಾರ್ಗದರ್ಶನ ಮಾಡುತ್ತ ಮಾತನಾಡುತ್ತಿದ್ದರು. ತಂಬಾಕು ಮತ್ತು ಮದ್ಯಪಾನದಿಂದ ಉಂಟಾಗುವ ಕ್ಯಾನ್ಸರ್ ಜೊತೆಗೆ ವ್ಯಸನಗಳಿಂದ ಮಾನಸಿಕ ಸಮಸ್ಯೆಗಳು, ಜ್ಞಾಪಕ ಶಕ್ತಿ ನಷ್ಟವಾಗುವುದು, ಖಿನ್ನತೆಗೆ ಒಳಗಾಗುವುದು ಸೇರಿದಂತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವ್ಯಸನವು ಕುಟುಂಬ ಮತ್ತು ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ವ್ಯಸನದಿಂದ ಮುಕ್ತವಾಗಿರುವುದರ ಕುರಿತು ಮಾರ್ಗದರ್ಶನ ಮಾಡಿದರು. ವಿಶ್ವದಾದ್ಯಂತ ಕ್ಯಾನ್ಸರ್, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಫೆ. 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಅದರ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ವಿವರಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಕಲ್ಲೋಳಿ ನಸಿಂರ್ಗ್ ಕಾಲೇಜ್ ಮಿರಜ್, ಪಾರಕರ್ ಇನ್ಸ್‌ಸ್ಟಿಟ್ಯೂಟ್ ಸಿಂಧುದುರ್ಗ, ಡಾ. ದೀಪಕ ಪಾಟೀಲ ನಸಿಂರ್ಗ್ ಇನ್ಸ್‌ಸ್ಟಿಟ್ಯೂಟ್ ಬೋರಪಾಳ ನಸಿಂರ್ಗ್ ಕಾಲೇಜಿನ ವಿದ್ಯಾರ್ಥಿಗಳು, ನಿರ್ಮಲ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.