ಬ್ಯಾಂಕಿನ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿ: ಹಿರೇಮಠ
ತಾಳಿಕೋಟಿ 04: ಜಿಲ್ಲೆಯಲ್ಲಿಯೇ ಒಳ್ಳೆಯ ಹೆಸರು ಹೊಂದಿರುವ ಈ ಬ್ಯಾಂಕನ್ನು ಕಟ್ಟಿ ಬೆಳೆಸಲು ಹಿರಿಯರು ಸಾಕಷ್ಟು ತ್ಯಾಗಗಳನ್ನು ಕೊಟ್ಟಿದ್ದಾರೆ ಅವರು ಹಾಕಿ ಕೊಟ್ಟು ಹೋದ ಮಾರ್ಗದಲ್ಲಿಯೇ ನಡೆದು ಬ್ಯಾಂಕಿನ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಕೆಲಸ ಮಾಡಿ ಎಂದು ವಿ.ವಿ. ಸಂಘದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಬ್ಯಾಂಕಿನ ನೂತನ ನಿರ್ದೇಶಕರಿಗೆ ಸಲಹೆ ನೀಡಿದರು.
ಮಂಗಳವಾರ ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ವಿರಕ್ತ ಶ್ರೀ ಸಭಾ ಭವನದಲ್ಲಿ ಸಂಘದ ವತಿಯಿಂದ ಹಮ್ಮಿಕೊಂಡ ತಾಳಿಕೋಟಿ ಸಹಕಾರಿ ಬ್ಯಾಂಕ್ ಗೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ನಿರ್ದೇಶಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬ್ಯಾಂಕಿನ ನೂತನ ಅಧ್ಯಕ್ಷ ಕಾಶಿನಾಥ ಸಜ್ಜನ ಅವರು ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಹಾಗೂ ಸಹಕಾರದಿಂದ ನಾವು ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದೇವೆ, ನಿಮ್ಮ ಋಣ ನಮ್ಮ ಮೇಲಿದೆ ಹಿರಿಯರು ಹಾಕಿ ಕೊಟ್ಟ ಮಾರ್ಗದಲ್ಲಿಯೇ ನಡೆದು ಬ್ಯಾಂಕಿನ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ 2024-25 ನೇ ಸಾಲಿನ ಜ್ಯೋತಿಬಾ ಫುಲೆ ಆದರ್ಶ ಪ್ರಾಚಾರ್ಯ ಪ್ರಶಸ್ತಿ ಪಡೆದ ಜ್ಯೋತಿ ಹಿರೇಮಠ, ರಾಜ್ಯಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ಪಡೆದ ಬಿ.ಟಿ.ಸಜ್ಜನ ಹಾಗೂ ಹಿಂದಿ ಭಾಷಾ ವಿಷಯದ ಮೇಲೆ ಪಿ.ಎಚ್.ಡಿ ಪದವಿ ಪಡೆದ ಡಾ.ಅನೀಲಕುಮಾರ ಇರಾಜ್ ಇವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿ ಸಂಘದ ಉಪಾಧ್ಯಕ್ಷ ಬಿ.ಎನ್.ಹಿಪ್ಪರಗಿ,ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ, ಬ್ಯಾಂಕಿನ ನೂತನ ಉಪಾಧ್ಯಕ್ಷ ಚಿಂತಪ್ಪಗೌಡ ಯಾಳಗಿ, ನಿರ್ದೇಶಕರಾದ ಮುರಿಗೆಪ್ಪ ಸರಶೆಟ್ಟಿ, ದತ್ತಾತ್ರೇಯ ಹೆಬಸೂರ, ಈಶ್ವರ್ಪ ಬಿಳೇಭಾವಿ,ಡಿ.ಕೆ.ಪಾಟೀಲ,ಬಾಬು ಹಜೇರಿ, ಪ್ರಹ್ಲಾದಸಿಂಗ್ ಹಜೇರಿ, ಸುರೇಶ ಪಾಟೀಲ, ಗಿರಿಜಾಬಾಯಿ ಕೊಡಗಾನೂರ, ಶೈಲಾ ವಿಶ್ವನಾಥ ಬಡದಾಳಿ,ಸಂಜೀವಪ್ಪ ಬರದೇನಾಳ,ರಾಮಣ್ಣ ಕಟ್ಟಿಮನಿ, ಪುರಸಭೆ ಮಾಜಿ ಸದಸ್ಯರಾದ ಪ್ರಭುಗೌಡ ಮದರಕಲ್ಲ,ಪ್ರಕಾಶ ಹಜೇರಿ, ನಿವೃತ್ತ ಶಿಕ್ಷಕ ಎಸ್.ಎನ್.ಬಸವಣ್ಣನವರ, ಗುರುನಾಥ ರೆಡ್ಡಿ ಪೊಲೀಸಪಾಟೀಲ ಸಂಘದ ನಿರ್ದೇಶಕರು, ಸದಸ್ಯರು,ಅಂಗ ಸಂಸ್ಥೆಗಳ ಮುಖ್ಯಸ್ಥರು,ಪ್ರಾಚಾರ್ಯರು, ಶಿಕ್ಷಕರು, ಬಿಎಡ್ ಪ್ರಶಿಕ್ಷಾರ್ಥಿಗಳು ಹಾಗೂ ಸಿಬ್ಬಂದಿಗಳು ಇದ್ದರು. ವಿದ್ಯಾರ್ಥಿನಿ ಐಶ್ವರ್ಯ ಚವಾಣ ಪ್ರಾರ್ಥಿಸಿದರು.ಉಪನ್ಯಾಸಕಿ ದೀಪಾ ಮಾಡಗಿ ಸ್ವಾಗತಿಸಿದರು. ಕಾಶಿನಾಥ ದೇಸಾಯಿ ನಿರೂಪಿಸಿ ವಂದಿಸಿದರು.