ಸಂಘದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿ: ರಾಮಲಿಂಗಯ್ಯಶ್ರೀ
ತಾಳಿಕೋಟಿ 21: ಸಮಾಜದ ಹಿರಿಯರು ಕೂಡಿಕೊಂಡು ಈ ಹಣಕಾಸಿನ ಸಂಸ್ಥೆಯನ್ನು ಕಷ್ಟಪಟ್ಟು ಕಟ್ಟಿದ್ದಾರೆ ಇದನ್ನು ರಕ್ಷಿಸಿ ಬೆಳೆಸುವುದು ಸಂಘದ ಆಡಳಿತ ಮಂಡಳಿ ಸದಸ್ಯರ ಕರ್ತವ್ಯವಾಗಿದೆ ಎಲ್ಲರೂ ಒಂದಾಗಿ ಸಂಘದ ಅಭಿವೃದ್ಧಿಗಾಗಿ ಕೆಲಸ ಮಾಡಿ ಎಂದು ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರಾದ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.
ಸೋಮವಾರ ಪಟ್ಟಣದ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘದ ಆಡಳಿತ ಮಂಡಳಿ ಸದಸ್ಯರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಸಂಘದ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಮಾಜದ ಗಣ್ಯರು ಪಟ್ಟಣದ ವಿ.ವಿ.ಸಂಘದ ಅಧ್ಯಕ್ಷ ವಿ.ಸಿ. ಹಿರೇಮಠ ಅವರು ಮಾತನಾಡಿ ಹಣಕಾಸಿನ ಸಂಸ್ಥೆಗಳು ಗ್ರಾಹಕರ ವಿಶ್ವಾಸದ ಮೇಲೆ ನಡೆಯುತ್ತವೆ,ಅದು ಕೆಡದಂತೆ ನೋಡಿಕೊಳ್ಳುವುದು ಸಂಘದ ಸದಸ್ಯರ ಕರ್ತವ್ಯವಾಗಿದೆ, ಚುನಾವಣೆ ನಡೆಯದಂತೆ ನೋಡಿಕೊಂಡು ಅವಿರೋಧವಾಗಿ ಆಯ್ಕೆಗೆ ಸಹಕರಿಸಿದ ನಿಮಗೆಲ್ಲರಿಗೂ ಧನ್ಯವಾದಗಳು, ನಮ್ಮ ನಮ್ಮ ಈ ಸಂಘಕ್ಕೆ ಇಲ್ಲಿಯವರೆಗೆ ಚುನಾವಣೆ ನಡೆದಿಲ್ಲ ಇದು ಹೆಮ್ಮೆಯ ವಿಷಯವಾಗಿದೆ ಎಂದರು.
ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಸಾಮಾನ್ಯ ಕ್ಷೇತ್ರದ ನಿರ್ದೇಶಕರಾದ ಈರಯ್ಯ ಎಂ. ಹಿರೇಮಠ, ನಾಗಲಿಂಗಯ್ಯ ಸಿ.ಡೋಣೂರಮಠ, ಸಂಗಯ್ಯ ಎಲ್.ಕೊಡಗಾನೂರ, ಬಸಯ್ಯ ಜಿ.ಹಿರೇಮಠ, ಪಂಚಾಕ್ಷರಿ ಎನ್. ಹಿರೇಮಠ, ಮಲ್ಲಯ್ಯ ಎನ್. ಸಾಲಿಮಠ, ಮುತ್ತುರಾಜ್ ವಿ. ಜಹಾಗೀರದಾರ, ಹಿಂದುಳಿದ ವರ್ಗ ಬ ಸ್ಥಾನದ ನಿಂಗಯ್ಯ ಚಿನ್ನಯ್ಯ ಹಿರೇಮಠ, ಮಹಿಳಾ ಸ್ಥಾನದ ವಿದ್ಯಾ ಎಮ್.ಮಠ, ರಾಜೇಶ್ವರಿ ಎಂ.ಮಠ ಹಾಗೂ ಸಮಾಜದ ಬಾಂಧವರು ಸಂಘದ ಸಿಬ್ಬಂದಿಗಳು ಇದ್ದರು.