ಸಮಾಜ ಕಟ್ಟುವದಕ್ಕಾಗಿ ಒಗ್ಗೂಡಿ ಕೆಲಸ ಮಾಡಿ: ಶ್ರೀರಾಮುಲು

ಲೋಕದರ್ಶನ ವರದಿ

ಯಲಬುಗರ್ಾ 17: ಸಮುದಾಯಕ್ಕೆ ಮೀಸಲಾತಿ ನೀಡಬೇಕು  ಬಿಜೆಪಿ ಸಕರ್ಾರ ಬಂದರೆ ಮೀಸಲಾತಿಯನ್ನು ಜಾರಿ ಮಾಡುತ್ತೇನೆ  ಸಮಾಜಕ್ಕಾಗಿ ಏನು ಬೇಕು ಅದನ್ನುಶಕ್ತಿ ಮೀರಿ ಮಾಡುತ್ತೇನೆ ನಮ್ಮ  ಸಮುದಾಯದವರು ಯಾವುದೇ ಪಕ್ಷದಲ್ಲಿದ್ದರು ಸಮಾಜ ಕಟ್ಟುವದಕ್ಕಾಗಿ ಒಗ್ಗೂಡಿ ಕೆಲಸ ಮಾಡಬೇಕು, ರಾಜ್ಯದಲ್ಲಿ ಬಿಜೆಪಿ ಸಕರ್ಾರ ಅಧಿಕಾರಕ್ಕೆ ಬಂದರೆ ವಾಲ್ಮೀಕಿ ಸಮುದಾಯಕ್ಕೆ ಶೇ 7.50 ರಷ್ಟು ಜಾರಿಗೆ ತರಲು ಬದ್ಧವಾಗಿರುವದಾಗಿ ಮೊಳಕಾಲ್ಮೂರ ಶಾಸಕ ಶ್ರೀರಾಮುಲು ಹೇಳಿದರು.

ಯಲಬುಗರ್ಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಶನಿವಾರದಂದು ಮಹಷರ್ಿ ವಾಲ್ಮೀಕಿ ಜಯಂತಿ ಹಾಗೂ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ನಾವೆಲ್ಲರೂ ಒಂದೆ ಒಗ್ಗೂಡಿಸಿ ಭಾಗವಹಿಸಬೇಕು ಸಮಾಜ ಒಗ್ಗೂಡಿಸಲು ಸ್ವಾಮಿಜಿ ನಾನು ಪ್ರಯತ್ನ ಮಾಡ್ತಾ ಇದ್ದೇವೆ ನಮ್ಮ ಸಮಾಜದಲ್ಲಿ ನಾವೊಬ್ಬರೆ ಅಭಿವೃದ್ಧಿ ಆಗುವುದಲ್ಲ. ಎಲ್ಲರೂ ಅಭಿವೃದ್ಧಿ ಆಗಬೇಕು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು  ನಾವು ಮಣ್ಣಾಗುವವರಿಗೆ ಈ ಸಮಾಜಕ್ಕಾಗಿ ದುಡಿಯುತ್ತೇವೆ ಅದಕ್ಕೆ ನಮ್ಮ ಸಮುದಾಯ ಹಾಗೂ ಬೇರೆ ಸಮಾಜಗಳ ಬೆಂಬಲಬೇಕಾಗಿದೆ ಎಂದರು.

ಭಾರತೀಯ ಜನತಾ ಪಾಟರ್ಿ ನಮ್ಮನ್ನು ಬೆಳೆಸಿದೆ ಈ ಮಟ್ಟಕ್ಜೆ ತಂದಿದೆ  ಈ ಪಕ್ಷವನ್ನು ಬಿಟ್ಟು ಹೋಗುವ ಉದ್ದೇಶವಿಲ್ಲ ಡಿ.ಕೆ. ಶಿವಕುಮಾರ ನನ್ನ ಮತ್ತು ಜನಾರ್ಧನ ರೆಡ್ಡಿ ಅವರನ್ನು ಸೆಳೆಯುತ್ತಿದ್ದಾರೆ ಎನ್ನುವ ಮಾತು ಉಹಪೋಹವಾಗಿದ್ದು, ನನ್ನ ಬೆಳವಣಿಗೆ ಸಹಿಸದ ಕೆಲವರು ನಡೆಸಿರುವ ಅಪಪ್ರಚಾರವಾಗಿದೆ, ನಾನು ಯಾವುದಕ್ಕೂ ಜಗ್ಗುವದಿಲ್ಲ ಜನರ ಆಶೀವರ್ಾದ ಇರುವವರೆಗೂ ಈ ಸಮಾಜ ಹಾಗೂ ನಾಡಿನ ಅಭಿವೃದ್ಧಿಗಾಗಿ ಕೆಲಸ ಮಾಡುವದಾಗಿ ಹೇಳಿದರು.

ಹಿರೇವಂಕಲಕುಂಟಾ ಹೋಬಳಿಯ ವಾಲ್ಮೀಕಿ ಮಹಾಸಭಾದ ವತಿಯಿಂದ ನಡೆದ ಮಹಷರ್ಿ ವಾಲ್ಮೀಕಿ ಜಯಂತಿ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯವನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿಮಹಾಸ್ವಾಮಿಗಳು ವಹಿಸಿದ್ದರು. 

ವೇದಿಕೆಯಲ್ಲಿ ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಟಿ.ರತ್ನಾಕರ್. ತಾಲ್ಲೂಕು ಅಧ್ಯಕ್ಷ ಹಂಚ್ಯಾಳಪ್ಪ ತಳವಾರ. ಜಿ.ಪಂ.ಸದಸ್ಯೆ ಹೋಳಿಯಮ್ಮ ಪೊ.ಪಾಟೀಲ, ಗೀರಿಜಾ ರೇವಣಪ್ಪ ಸಂಗಟಿ. ತಾ.ಪಂ.ಅಧ್ಯಕ್ಷೆ ಲಕ್ಷ್ಮೀ ಗೌಡ್ರ. ಮುಖಂಡರಾದ ಬಸವರಾಜ ಗಾವರಾಳ. ನವೀನ ಗುಳಗಣ್ಣವರ. ಜೋಗದ ನಾರಯಣಪ್ಪ. ನಾಗರಾಜ್ ಬಿಲ್ಲಗಾರ. ಸಂಜೀವ ಸಂಗಟಿ. ಫಕೀರಪ್ಪ ತಳವಾರ. ಭೀಮನಗೌಡ. ತಾಳಕೇರಿ. ಶರಣಗೌಡ ಪಾಟೀಲ. ಮಾನಪ್ಪ ಪೂಜಾರ, ಪಪಂ ಸದಸ್ಯರಾದ ಕಳಕಪ್ಪ ತಳವಾರ, ರಾಮಣ್ಣ ತಳವಾರ. ದೇವಿಂದ್ರಪ್ಪ ಜಿಲರ್ಿ. ಶ್ರೀಕಾತ ತರಲಕಟ್ಟಿ, ಯಮನೂರಪ್ಪ ತರಲಕಟ್ಟಿ. ಹಾಗೂ ಇತರರು ಇದ್ದರು.