ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ -ಶಾಸಕ ಕೃಷ್ಣನಾಯ್ಕ್‌

Work hard to improve SSC result - Shasaka Krishna Naik

ಎಸ್ಸೆಸ್ಸೆಲ್ಸಿ  ಫಲಿತಾಂಶ  ಸುಧಾರಣೆಗೆ  ಶ್ರಮಿಸಿ  -ಶಾಸಕ ಕೃಷ್ಣನಾಯ್ಕ್‌

ಹೂವಿನ ಹಡಗಲಿ 04: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಘಟ್ಟ. ಕಷ್ಟ ಪಟ್ಟು ಓದಿದರೆ ಸಾಧನೆ ಸಾಧ್ಯ ಎಂದು ಶಾಸಕ ಎಲ್ ಕೃಷ್ಣನಾಯಕ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಉಪ ನಿರ್ದೇಶಕರ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕಾಗಿ ಪ್ರೌಢಶಾಲಾ ಮುಖ್ಯ ಗುರುಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಪರೀಕ್ಷಾ ಪ್ಯಾಕೇಜ್ ಅನಾವರಣಗೊಳಿಸಿ ಅವರು ಮಾತನಾಡಿದರು. 

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕಗಳನ್ನು ಗಳಿಸುವ ಸದುದ್ದೇಶದಿಂದ ಪರೀಕ್ಷಾ ಪ್ಯಾಕೇಜ್ ತಾಲೂಕಿನ ಎಲ್ಲಾ ಪ್ರೌಢಶಾಲೆಗಳಿಗೆ ವಿತರಿಸುವ ಕಾರ್ಯ ಉತ್ತಮ ಸಂಯೋಜನೆ ಎಂದು ತಿಳಿಸಿದರು.ಅಧಿಕ ಅಂಕ ಗಳಿಸುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ನಿಧಾನಗತಿಯ ಮಕ್ಕಳಿಗೂ ವಿಶೇಷ ಆದ್ಯತೆ ನೀಡಿರಿ ಎಂದು ಹೇಳಿದರು.ತಾಲೂಕಿನ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಮುಖ್ಯ ಗುರುಗಳು ಸಹ ಶಿಕ್ಷಕರು ಶಾಲೆಯ ಹಳೆ ವಿದ್ಯಾರ್ಥಿಗಳ ಮನಒಲಿಸಿ ಕುಡಿಯುವ ನೀರು ಕಂಪ್ಯೂಟರ್ ಗ್ರಂಥಾಲಯ ಪ್ರಯೋಗಾಲಯ ಅಭಿವೃದ್ಧಿ ಪಡಿಸಲು ಪ್ರಯತ್ನಿಸಿರಿ ಎಂದು ಹೇಳಿದರು.ಉಪ ನಿರ್ದೇಶಕರಾದ ವೆಂಕಟೇಶ್ ರಾಮಚಂದ್ರ​‍್ಪ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಫಲಿತಾಂಶ ಸುಧಾರಣೆಗಾಗಿ ಸರಣಿ ಸಭೆ ನಡೆಸಿ ಮಾರ್ಗದರ್ಶನ ನೀಡಲಾಗುತ್ತಿದೆ. ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಫಲಿತಾಂಶ ಪ್ರಗತಿ ಪರೀಶೀಲಿಸಿ ಉಪಯುಕ್ತ ಮಾಹಿತಿ ನೀಡಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ವಿಷಯ ಶಿಕ್ಷಕರ ಸರಣಿ ಸಭೆ, ಬೆಳಿಗ್ಗೆ ವಿಶೇಷ ತರಗತಿ, ಸಂಜೆ ಗುಂಪು ಅಧ್ಯಯನ, ಪೋಷಕರ ಸಭೆ,ಪಾಲಕರ ಮನೆ ಭೇಟಿ ಮೊದಲಾದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು. 

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಯ್ಯನಗೌಡರ ಕೊಟ್ರಗೌಡ,ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್ ಹುಲಿಬಂಡಿ,ಬಸವಂತಯ್ಯ ಹಿರೇಮಠ,ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ, ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ ಎಂ ಕಾಂತೇಶ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶಿವಲಿಂಗಪ್ಪ ರಾಜ್ಯ ಸಹ ಕಾರ್ಯದರ್ಶಿ ಗಡ್ಡಿ ಶಿವಕುಮಾರ್, ಶಿವಬಸವ ಸ್ವಾಮಿ ಹಿರೇಮಠ, ಬಸಪ್ಪ ಕೆ,ಎಂ ಶೇಕ್ ಅಹಮದ್, ಕಸ್ತೂರಿ ಮುದ್ದಿ, ಎಲ್ ಖಾದರಬಾಷಾ, ವಿಶ್ವನಾಥ ಕೋರಿ, ಚಂದ್ರ​‍್ಪ ಇತರರು ಉಪಸ್ಥಿತರಿದ್ದರು.ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್ ಮಲ್ಲಿಕಾರ್ಜುನ, ಇ ಸಿ ಒ ಮಿಟ್ಯಾನಾಯ್ಕ್‌, ನಿರ್ವಹಿಸಿದರು.ತಾಲೂಕಿನ ಸರ್ಕಾರಿ ಅನುದಾನಿತ ಅನುದಾನರಹಿತ ಮೊರಾರ್ಜಿ ವಸತಿ ಪ್ರೌಢಶಾಲೆಗಳ ಮುಖ್ಯ ಗುರುಗಳು ಭಾಗವಹಿಸಿದ್ದರು.