ವಿಶೇಷ ತರಬೇತಿ ಪಡೆದುಕೊಂಡು ಮಹಿಳೆಯರು ಸ್ವಾವಲಂಬಿಗಳಾಗಿ ಉನ್ನತ ಸ್ಥಾನಮಾನಗಳಿಸಬೇಕು
ಹಾವೇರಿ 27: ಅಂಗನವಾಡಿಗಳ ಮೂಲಕ ಮಹಿಳೆಯರನ್ನು ಸಂಘಟಿಸಿ ಕುಟುಂಬದ ಆರ್ಥಿಕತೆ, ಆದಾಯ, ಖರ್ಚು ವೆಚ್ಚದ ಕುರಿತು ಬಜ್ ಸಂಸ್ಥೆ ನೀಡುತ್ತಿರುವ ವಿಶೇಷ ತರಭೇತಿಯನ್ನು ಸ್ತ್ರೀಯರು ಪಡೆದುಕೊಂಡು ಸ್ವಾವಲಂಬಿಯಾಗಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಡಾ. ದೇವಾನಂದ ದೊಡ್ಡಮನಿ ಅಭಿಪ್ರಾಯಪಟ್ಟರು. ತಾಲೂಕಿನ ಗುತ್ತಲ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಗುರುವಾರ ಬಜ್ ಇಂಡಿಯಾ ಟ್ರಸ್ಟ್ ಆಯೋಜಿಸಿದ್ದ ವಿಶೇಷ ತರಭೇತಿ ಕಾರ್ಯಕ್ರಮವನ್ನು ಮಹಿಳೆಯರಿಗೆ ಕಿಟ್ ಕೊಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿವೆ. ಬಜ್ ಸಂಸ್ಥೆಯು ಕೈಸಾಲ ಮಾಡುವುದು ಅಗತ್ಯವಿಲ್ಲ; ಆದಾಯಕ್ಕನುಗುಣವಾಗಿ ಖರ್ಚನ್ನು ಕಡಿಮೆ ಮಾಡಿಕೊಂಡು ಉಳಿತಾಯ ಮಾಡಬಹುದು ಎಂಬುದನ್ನು ವಸ್ತುನಿಷ್ಠವಾಗಿ ಕೌಶಲಗಳ ಮೂಲಕ ತರಭೇತಿ ನೀಡುತ್ತಿರುವುದು ಅಭಿನಂದನಾರ್ಹ. ಈ ವಿಶೇಷ ತರಭೇತಿ ಪಡೆದುಕೊಂಡು ಮಹಿಳೆಯರು ಸ್ವಾವಲಂಬಿಗಳಾಗಿ ಉನ್ನತ ಸ್ಥಾನಮಾನ ಗಳಿಸಬೇಕು ಎಂದರು.ಪ್ರಾಸ್ತಾವಿಕವಾಗಿ ಬಜ್ ಸಂಸ್ಥೆಯ ತರಭೇತಿ ಸುಗಮಕಾರರಾದ ರೇಣುಕಾ ಕಹಾರ ಮಾತನಾಡಿದರು. ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಾಳವ್ವ ಗೊರವರ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಅಮೀನಾ ಗಳಗನಾಥ, ಯಶೋಧಾ ಕಮ್ಮಾರ, ಜಯಲಕ್ಷ್ಮೀ ಅಂಗೂರು, ಇಂದಿರಾ ಲಮಾಣಿ, ಚೈತ್ರಾ ಮೈಕಲ್, ದೇವಿಕಾ ಲಮಾಣಿ, ಸುಮಂಗಲಾ ಚರಂತಿಮಠ, ಕಾಂಚನಾ ಓದಿಸೋಮಠ, ಅಸ್ಮಾಬಾನು ನೆಗಳೂರು, ಭಾಗ್ಯಶ್ರೀ ಸೀತಾಳ, ಚಮನಬಿ ಬಾಗವಾನ್ ಸೇರಿದಂತೆ ಮಹಿಳೆಯರು ಪಾಲ್ಗೊಂಡಿದ್ದರು.