ಗಿನ ಮಹಿಳೆಯರು ಕೇವಲ ಮನೆಯ ಗ್ರಹಣಿಯ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ: ಶಾಸಕ ವಿಶ್ವಾಸ ವೈದ್ಯ
ಸವದತ್ತಿ 23 : ಈಗಿನ ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲವನ್ನೂ ಸಾಧಿಸಬಹುದುಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ ಅದರಂತೆ ಸಾಹಿತ್ಯದಲ್ಲಿಯೂ ಕೂಡ ಮುಂದೆ ಇದ್ದಾರೆ ಈಗಿನ ಮಹಿಳೆಯರು ಮನೆಯ ಜವಾಬ್ದಾರಿಯನ್ನು ಹೊತ್ತು ಮನೆಯ ಗೃಹಿಣಿಯಾಗಿ ಇರುವುದರ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯರವರು ಹೇಳಿದರು.ಅವರು ಪಟ್ಟಣದ ಗುರುಭವನದಲ್ಲಿ ನಡೆದ ಸೀಮಾ ಶಶಿರಾಜ ವನಕಿಯವರು ರಚಿಸಿದ ಕರಿನೆರಳಕೃಷ್ಣೆ ಮತ್ತು ಅವಳೊಂದು ಪಾರಿಜಾತ ಎಂಬ ಕೃತಿಗಳ ಲೋಕಾರೆ್ಣ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.ಮುನವಳ್ಳಿಯ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಕೃತಿಗಳ ಲೋಕಾರೆ್ಣ ಮಾಡಿ ಆಶೀರ್ವಚನ ನೀಡಿದರು. ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷರಾದ ಚಿನ್ನವ್ವಗಿ ಹುಚ್ಚಣ್ಣವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ. ಧಾರವಾಡದ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಹಲಗತ್ತಿ. ಅಲ್ಲಮಪ್ರಭು ಪ್ರಭು ನವರ. ಬಸವರಾಜ ಕಾರದಗಿ. ಡಾ. ನಯನಾ ಭಸ್ಮೇ. ಡಾ ವೈ ಬಿ ಕಡಕೋಳ. ಡಾ. ಅಭಿನಂದನ ಕಬ್ಬಿನ. ಝಕೀರ್ ನದಾಫ. ಶಿವರಾಜ ಸುರೇಶ ವಣಕಿ. ಬಸವರಾಜ ಕಪ್ಪಣ್ಣವರ. ಮಹೇಶ ವನಕಿ. ಪ್ರಕಾಶ ವನಕಿ. ಎಲ್,ಎಸ್ ನಾಯ್ಕ. ವನಕಿ ಹಾಗೂ ಅರಿಬೆಂಚಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.ಇದೇ ವೇದಿಕೆಯ ಮೇಲೆ ಶಾಸಕ ವಿಶ್ವಾಸ ವೈದ್ಯರವರನ್ನು ಹಾಗೂ ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳನ್ನು ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಮುಖ್ಯ ಅತಿಥಿಗಳನ್ನು ಮಾಧ್ಯಮದವರನ್ನು ವನಕಿ ಕುಟುಂಬದ ವರು ಸನ್ಮಾನಿಸಿ ಗೌರವಿಸಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಸೀಮಾ ಶಶಿರಾಜ ವನಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಬಿ.ಐ.ಚಿನಗುಡಿ ಹಾಗೂ ಉಮೇಶ ಬಡಿಗೇರ ಕೃತಿ ಪರಿಚಯ ಮಾಡಿದರು, ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಬಸವರಾಜ ಕಾರದಗಿ, ಡಾ.ಅಭಿನಂದನ ಕಬ್ಬಿನ, ವೈ. ಬಿ. ಕಡಕೋಳ, ಶಂಕರ ಹಲಗತ್ತಿ, ಝಕೀರ ನದಾಫ, ಡಾ. ನಯನಾ ಭಸ್ಮೇ, ಮೊದಲಾದವರು ಮಾತನಾಡಿ ಲೇಖಕಿ ಸೀಮಾ ವನಕಿ ಹಾಗೂ ಶಶಿರಾಜ ವನಕಿ ದಂಪತಿಗಳನ್ನು ಸನ್ಮಾನ ನೆರವೇರಿಸಿ ಶುಭ ಕೋರಿದರು.ಶಶಿರಾಜ ಸುರೇಶ ವನಕಿ ಸ್ವಾಗತಿಸಿದರು. ಶಿವಾನಂದ ತಾರಿಹಾಳ ಕಾರ್ಯಕ್ರಮ ನಿರೂಪಿಸಿದರು.